ಗುಂಡ್ಲುಪೇಟೆ : ಹಾಡಹಗಲೇ ಹುಲಿಗಳು ಕಾದಾಡಿ ಅದರಲ್ಲಿ ಒಂದು ವ್ಯಾಘ್ರ ತೀವ್ರವಾಗಿ ಗಾಯಗೊಂಡು ಜಮೀನಿನಲ್ಲಿ ಮಲಗಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.

ಕುಂದಕೆರೆ ಗ್ರಾಮದ ಮಾದೇವ್ ಎಂಬವರ ಜಮೀನಿನಲ್ಲಿ ಈ ಘಟನೆ ಆಗಿದೆ ಎಂದು ತಿಳಿದುಬಂದಿದ್ದು ಕಾದಾಟದಲ್ಲಿ ಗಾಯಗೊಂಡ ಹುಲಿ ಕಂಡು ರೈತ ಭಯಗೊಂಡು ಕಾಲ್ಕಿತ್ತಿದ್ದಾರೆ. ಹುಲಿಗಳ ಕಾದಾಟದಲ್ಲಿ ಒಂದು ಹುಲಿ ಗಾಯಗೊಂಡು ಅಸ್ವಸ್ಥಗೊಂಡ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ಕೊಟ್ಟಿದ್ದರು.

ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿಯನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದ್ದು ಹುಲಿಗೆ 11 ವರ್ಷ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.‌ ಬಂಡೀಪುರದ ಪಶು ವೈದ್ಯ ಡಾ.ವಾಸೀಂ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದ ಬಂಡೀಪುರ ಅರಣ್ಯಾಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ನೀಡಿ ಗಾಯಗೊಂಡ ಹುಲಿಯನ್ನು ಸೆರೆ ಹಿಡಿದು ಚಿಕಿತ್ಸೆಗಾಗಿ ಮೈಸೂರಿನ ಕೂರ್ಗಳ್ಳಿಗೆ ರವಾನೆ ಮಾಡಿದ್ದಾರೆ ಹುಲಿಯ ಕಾಲು ಹಾಗೂ ಮುಖದ ಭಾಗಕ್ಕೆ ತೀವ್ರವಾಗಿ ಗಾಯಗಳಾಗಿದೆ.