ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ನಾಗಪಟ್ಟಣದ ಗ್ರಾಮದ ಹೊರವಲಯದಲ್ಲಿ ಹಾಡಹಗಲೇ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ತೀವ್ರತರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ವಲಯಕ್ಕೆ ಸೇರಿದ ನಾಗಪಟ್ಟಣ ಗ್ರಾಮದ ಮಹದೇವಶೆಟ್ಟಿ ಎಂಬವರಿಗೆ ಸೇರಿದ ಹಸು ಹುಲಿದಾಳಿಗೆ ಗಾಯಗೊಂಡಿದೆ. ಹಸುಗಳನ್ನ ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ ಈ ವೇಳೆ ಹುಲಿ ದಾಳಿಯನ್ನ ಕಂಡ ರೈತರು ಕೂಗಾಡಿದ್ದಾರೆ ರೈತರ ಕೂಗಾಟಕ್ಕೆ ಬೆದರಿದ ಹುಲಿ ಅಲ್ಲಿಂದ ಕಾಲ್ಕಿತ್ತಿದೆ.
ಇತ್ತೀಚಿಗೆ ಹುಲಿಗಳ ಕಾಟ ಹೆಚ್ಚಾಗುತ್ತಿರೋದ್ರಿಂದ ರೈತಾಪಿ ವರ್ಗ ಆತಂಕಕ್ಕೆ ಸಿಲುಕಿದ್ದು ಹುಲಿ ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಘಟನಾ ಸಂಬಂದ ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

