ಗುಂಡ್ಲುಪೇಟೆ : ಬಂಡೀಪುರ ಹುಲಿಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಸೇರಿದ ಮಂಚಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬವರ ಮೇಕೆಗಳ ದಾಳಿ ನಡೆಸಿದ ಚಿರತೆ ಮೂರು ಮೇಕೆಗಳನ್ನ ಕೊಂದುಹಾಕಿದ್ದು ಒಂದನ್ನ ಎಳೆದೊಯ್ದಿದೆ.
ಗ್ರಾಮದ ಹೊರವಲಯದ ಮಂಗಳಮ್ಮನ ಗುಡ್ಡದ ಸಮೀಪ ಮೇಕೆಗಳನ್ನ ಮೇಯಿಸಿ ವಾಪಾಸ್ ಬರುವ ವೇಳೆ ಮೇಕೆ ಹಿಂಡಿನ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆ ಮೂರನ್ನ ಬಲಿ ಪಡೆದಿದೆ. ಮೇಕೆ ಸಾಕಾಣಿಕೆಯನ್ನೇ ನಂಬಿ ಬದುಕು ನಡೆಸುತ್ತಿದ್ದ ಬಡ ಮಹಿಳೆ ಭಾಗ್ಯಮ್ಮ ಮೇಕೆಗಳನ್ನ ಕಳೆದುಕೊಂಡು ಕಣ್ಣೀರು ಹಾಕಿದ್ದಾರೆ.
ಘಟನಾ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಮುಖಂಡರು ದೂರಿದ್ದು ಮೇಕೆ ಕಳೆದುಕೊಂಡಿರೋ ಭಾಗ್ಯಮ್ಮ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

