ಗುಂಡ್ಲುಪೇಟೆ : ರಾಮನಗರದಲ್ಲಿ ತಮ್ಮ ಭೂಮಿಯನ್ನ ಉಳಿಸಿಕೊಳ್ಳಲು ಪ್ರತಿಭಟನೆಗಿಳಿದಿದ್ದ ರೈತರನ್ನ ಬೆದರಿಸಿದ್ದಾರೆ 9500 ಎಕರೆ ಭೂಮಿಯನ್ನ ವಶಪಡಿಸಿಕೊಂಡ ನೀವು ಅನ್ಯತಾ ರೈತರಿಗೆ ಉಪದ್ರ ನೀಡುತ್ತಿದ್ದೀರಿ ಗ್ರೇಟರ್ ಬೆಂಗಳೂರಿಗೆ ರೈತರ ಜೀವನದ ಜೊತೆ ಚೆಲ್ಲಾಟವಾಡ್ತೀದೀರಿ ಅಂತ ರೈತ ಸಂಘ ಹೊನ್ನೂರು ಪ್ರಕಾಶ್ ಆಕ್ರೋಶ ಹೊರಹಾಕಿದರು.

ಡಿಸಿಎಂ ಡಿಕೆಶಿ ವಿರುದ್ಧ ಗುಂಡ್ಲುಪೇಟೆ ಪಟ್ಟಣದಲ್ಲಿ ಪ್ರತಿಭಟನೆಗಿಳಿದ ಸಾಮೂಹಿಕ ನಾಯಕತ್ವ ರೈತ ಸಂಘ ಸದಸ್ಯರು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ರಾಹುಲ್ ಗಾಂಧಿಯವರೆ ಇಂತಹ ಪುಂಡಾಟಿಕೆಯಿಂದ ಜನರಿಗೆ ಒಳಿತು ಮಾಡೋದಾದ್ರು ಹೇಗೆ ಪ್ರಜಾಪ್ರಭುತ್ವದಲ್ಲಿ ರೈತರಿಗೆ ಹೋರಾಟ ಮಾಡುವ ಹಕ್ಕಿಲ್ಲವೇ, ಬೆದರಿಕೆ ಹಾಕುವಂತ ಪ್ರವೃತ್ತಿಯನ್ನ ಬಿಟ್ಬಿಡಿ ಎಂದು ಹೊನ್ನೂರು ಪ್ರಕಾಶ್ ಆಕ್ರೋಶ ಹೊರಹಾಕಿದರು.