ಗುಂಡ್ಲುಪೇಟೆ : ಅನ್ಯಧರ್ಮದ ವ್ಯಕ್ತಿಯೋರ್ವ ಮಠದ ಸ್ವಾಮೀಜಿಯಾಗಲು ಗ್ರಾಮದಲ್ಲಿ ವಾಸ್ತವ್ಯಹೂಡಿದ್ದವನ ನಿಜಬಣ್ಣ ಬಯಲಾಗಿ ಗ್ರಾಮಸ್ತರೆಲ್ಲರೂ ಆತನನ್ನ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.
ಧರ್ಮ ಮರೆಮಾಚಿ ಸ್ವಾಮೀಜಿ ಎಂದು ನಂಬಿಸಿ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಜನರಿಗೆ ಮಂಕುಬೂದಿ ಎರಚಿದ್ದ ಉತ್ತರ ಕರ್ನಾಟಕ ಯಾದಗಿರಿ ಜಿಲ್ಲೆಯ ಶಹಾಪುರ ಗ್ರಾಮದ ನಿಜಲಿಂಗ ಸ್ವಾಮಿ ಎಂದು ಘೋಷಿಸಿಕೊಂಡಿದ್ದ ಮುಸ್ಲಿಂ ವ್ಯಕ್ತಿ ಮಹಮ್ಮದ್ ನಿಸಾರ್ ಎಂಬಾತನನ್ನ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮೂಲತಃ ಮುಸ್ಲಿಂ ಜನಾಂಗದ ಈತ ಲಿಂಗಾಯತ ಧರ್ಮಕ್ಕೆ ಆಕರ್ಷಿತನಾಗಿ ಲಿಂಗ ದೀಕ್ಷೆ ಪಡೆದು ಸ್ವಾಮಿತ್ವ ಸ್ವೀಕರಿಸಿದ್ದೇನೆ ಎಂದು ಸತ್ಯ ಬಾಯ್ಬಿಟ್ಟಿದ್ದಾನೆ ಆದರೆ ಮುಸ್ಲಿಂ ಎಂಬ ಸತ್ಯವನ್ನ ಮುಚ್ಚಿಟ್ಟಿರುವುದಕ್ಕೆ ಕಾರಣವೇನು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಮುಸಲ್ಮಾನ ವ್ಯಕ್ತಿಯನ್ನ ನಾವು ಗುರು ಎಂದು ಒಪ್ಪಲು ಸಾಧ್ಯವೇ ಇಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಮಹಮ್ಮದ್ ನಿಸಾರ್ ಎಂಬ ಈತನಿಗೆ 22 ವರ್ಷ ವಯಸ್ಸಾಗಿದೆ ಆದರೆ ಧರ್ಮವನ್ನ ಮುಚ್ಚಿಟ್ಟು ಮಠದಲ್ಲಿ ಆಶ್ರಯ ಪಡೆಯಲು ಕಾರಣವೇನು ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಕೊನೆಯಲ್ಲಿ ಸ್ವಾಮೀಜಿ ವೇಷ ತೊಟ್ಟಿದ್ದ ಈತನ ಪೂರ್ವಾಪರ ಬಯಲಾಗಿದ್ದು ಗಂಟು ಮೂಟೆ ಕಟ್ಟಿ ಮಠ ತೊರೆದಿದ್ದಾನೆ.

