ಗುಂಡ್ಲುಪೇಟೆ : ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಾಯವಾಣಿಗೆ ಕರೆ ಮಾಡಿದ ಕಿಡಿಗೇಡಿಗಳು ಕುಟುಂಬದ ಹಿಡಿಶಾಪಕ್ಕೆ ಗುರಿಯಾಗಿದ್ದಾರೆ.
ಮಕ್ಕಳ ರಕ್ಷಣೆಗೆ ಬಳಕೆಯಾಗಬೇಕಿದ್ದ ಸಹಾಯವಾಣಿ ಇದೀಗ ಕಿಡಿಗೇಡಿಗಳ ಕಾಲಹರಣ ಆಟಿಕೆಯಾಗಿ ಬದಲಾಗಿದೆಯೇ ಎಂಬುದಕ್ಕೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಓರ್ವ ವಿದ್ಯಾರ್ಥಿನಿ ಕುರಿತಾಗಿ ನೀಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು,
ವಿವಾಹ ಶುಭ ಸಮಾರಂಭಕ್ಕೆ ಯಾವುದೇ ಸಿದ್ಧತೆಯಿಲ್ಲದಿದ್ದರೂ ಸಹ ತಮ್ಮ ವಿರುದ್ಧ ಮಹಿಳಾ ಮತ್ತು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯ ತೇಜೋವದೇ ಮಾಡಲು ಮುಂದಾಗಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಅಣ್ಣೂರುಕೇರಿ ಗ್ರಾಮದ ಚಿಕ್ಕಾತಾಯಮ್ಮ ಮಗಳು ಸರ್ಕಾರಿ ಶಾಲೆಯಲ್ಲಿ ಓಡುತ್ತಿದ್ದಾಳೆ ಆದರೆ ಕಿಡಿಗೇಡಿಗಳ ಕಿಡಿಗೇಡಿಗಳ ಕೃತ್ಯದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದಳು ಎಂದು ಯುವತಿ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ, ಸದ್ಯ ಸುಳ್ಳು ದೂರಿನನ್ವಯ ಗ್ರಾಮಕ್ಕೆ ಭೇಟಿ ನೀಡಿ ಪತ್ರಿಕೆಗಳಲ್ಲಿ ಯುವತಿಯ ಕುರಿತು ಪ್ರಕಟವಾಗಿರುವುದು ಸುಳ್ಳು ಎಂದು ತಿಳಿಸಿದ್ದಾರೆ.

