ಗುಂಡ್ಲುಪೇಟೆ : ಯುವತಿಯನ್ನ ಪ್ರೀತಿಯ ಬಲೆಗೆ  ಕೆಡವಲು ಹಿಂದೂ ಎಂದು ನಂಬಿಸಿದ್ದ ಅನ್ಯಕೋಮಿನ ಯುವಕನನ್ನ ಗುಂಡ್ಲುಪೇಟೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಇತ್ತೀಚಿಗೆ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತ ಆವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ, ಯುವತಿಗೆ ನಿನ್ನ ಸ್ನೇಹಿತೆಯ ಸಹೋದರ ಎಂದು ನಂಬಿಸಿ ಪರಿಚಯ ಮಾಡಿಕೊಂಡಿದ್ದ ಈತ ಯುವತಿಗೆ ಹಿಂಸೆ ನೀಡುತ್ತಿದ್ದ, ಇದಕ್ಕೂ ಮುಂಚೆ ಯುವತಿಯು ಪಟ್ಟಣದ ಜೆ ಎಸ್ ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿದ್ದ ವೇಳೆ ಪಟ್ಟಣದ ಅಯೂಬ್ ಎಂಬವನ ಪರಿಚಯವಾಗಿದೆ.

ಆದರೆ ಈತ ಯುವತಿಯ ಸ್ನೇಹಿತೆಯ ಸಂಬಂದಿಕ ಎಂದು ಸುಳ್ಳು ಹೇಳಿದ್ದ ಜೊತೆಗೆ ಆಕೆಯ ಸಹೋದರ ಎಂದು  ನಂಬಿಸಿದ್ದನಂತೆ, ಪಿಯುಸಿ ಮುಗಿದ ನಂತರ ಬಿಎ ಓದಲು ಮೈಸೂರಿನ ವಿದ್ಯಾವರ್ಧಕ ಕಾಲೇಜಿಗೆ ಸೇರಿದ ಬಳಿಕ ಪ್ರತಿನಿತ್ಯ ಬಸ್ ನಿಲ್ದಾಣಕ್ಕೆ ಬಂದು ನನ್ನನ್ನ ತಂಗಿ ಎಂದು ಕರೆಯುತ್ತಿದ್ದ.  ಆಗ ನಾನು ಸಹ ಅಣ್ಣ ಎಂದು ಭಾವಿಸಿದ್ದೆ ಆದರೆ ಈತ ಮುಸ್ಲಿಂ ಸಮುದಾಯದವನು ಎಂದು ಖಾತ್ರಿಯಾದ ಬಳಿಕ ಆತನ ಜೊತೆ ಮಾತನಾಡುವುದನ್ನ ನಿಲ್ಲಿಸಿದ್ದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಮಾತು ನಿಲ್ಲಿಸಿದ ಬಳಿಕ ನನ್ನನ್ನ ಹಿಂಬಾಲಿಸಿ ಬಂದು ನಿನ್ನನ್ನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದು ಅಯೂಬ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.