ಗುಂಡ್ಲುಪೇಟೆ : ರೇಸಾರ್ಟ್ಸಗಳ ಹಾವಳಿಯಿಂದ ಕಂಗೆಟ್ಟಿದ್ದ ವನ್ಯಪ್ರಾಣಿಗಳಿಗೀಗ ಸೋಲಾರ್ ಬ್ಲೇಡ್ ಪೆನ್ಸಿಂಗ್ ಸಂಕಷ್ಟ ಎದುರಾಗಿದೆ. ಶಾಕಿಂಗ್ ವಿಚಾರ ಏನಂದ್ರೆ ಸೋಲಾರ್ ಬೇಲಿ ಅಳವಡಿಸೋ ಜೊತೆಗೆ ಬ್ಲೇಡ್ ತಂತಿ ಅಳವಡಿಸುವ ಖತರ್ನಾಕ್ ಐಡಿಯಾಗೆ ಮುಂದಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮಂಗಲ ಗ್ರಾಮದ ಸಮೀಪ ಸೆಂಥಿಲ್ ಕುಮಾರ್ ಎಂಬಾತ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ತರುವಂತ ಅಪಾಯಕಾರಿ ಬೇಲಿ ಅಳವಡಿಸಿ ಪರಿಸರವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಆಕಸ್ಮಾತ್ ವನ್ಯಪ್ರಾಣಿಗಳೇನಾದ್ರು ಬೇಲಿ ಪ್ರವೇಶಿಸುವ ಪ್ರಯತ್ನ ಮಾಡಿದ್ರೆ ದೇಹವನ್ನ ಕತ್ತರಿಸುವಂತ ಬ್ಲೇಡ್ ಅಳವಡಿಸಿರುವುದು ಕಂಡು ಬಂದಿದೆ. ಸದ್ಯ ಪ್ರಾಣಿಗಳ ಜೀವಕ್ಕೆ ಕಂಟಕವಾಗಿರುವ ಬ್ಲೇಡ್ ಸೋಲಾರ್ ಬೇಲಿ ಅಳವಡಿಸಿರುವ ವ್ಯಕ್ತಿಯ ವಿರುದ್ಧ ಅರಣ್ಯ ಇಲಾಖೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಜೋಸೆಫ್ ಹೂವರ್ ಒತ್ತಾಯಿಸಿದ್ದಾರೆ.

