ಗುಂಡ್ಲುಪೇಟೆ : ತಾಲೂಕಿನ ಭೀಮನಬೀಡು ಗ್ರಾಮದ ರೈತ ಸಿದ್ದರಾಜು ಎಂಬವರ ಜಮೀನಿನಲ್ಲಿ ಬೆಳೆದಿದ್ದ ಬೆಳ್ಳುಳ್ಳಿಯನ್ನ ಕಳ್ಳರು ನಿನ್ನೆ ರಾತ್ರಿ ಕಳವು ಮಾಡಿರುವ ಘಟನೆ ನಡೆದಿದೆ.
ಸುಮಾರು 5 ಕ್ವಿಂಟಲ್ ಬೆಳ್ಳುಳ್ಳಿಯನ್ನ ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಸಿದ್ದರಾಜು ಅವರು ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆ ಬೆಳೆದಿದ್ದು, ಉತ್ತಮ ಇಳುವರಿ ನೀಡಿದ್ದ ಬೆಳೆ ಕಟಾವು ಹಂತದಲ್ಲಿತ್ತು.
ಘಟನೆಯ ಕುರಿತು ಮಾತನಾಡಿದ ರೈತ ಸಿದ್ದರಾಜು ಅವರು ಸಾಲ ಮಾಡಿ ಬೆಳೆ ಬೆಳೆದಿದ್ದೆ. ಈಗ ಕಳ್ಳತನದಿಂದ ನನಗೆ ತುಂಬಲಾರದ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

