ಚಾಮರಾಜನಗರ : ತಾಯಿಯಿಂದ ಬೇರ್ಪಟ್ಟಿದ್ದ ಮರಿಯೊಂದು ಆರೈಕೆ ಸಿಗದೇ ಅಸ್ವಸ್ಥಗೊಂಡಿತ್ತು, ಆನೆಮರಿಗೆ ಅರಣ್ಯ ಇಲಾಖೆ ಚಿಕಿತ್ಸೆ ಕೊಟ್ಟು ಮತ್ತೇ ಅಮ್ಮನ ಮಡಿಲು ಸೇರಿಸಿದ ವಿಶೇಷ ಘಟನೆ ಚಾಮರಾಜನಗರ ಜಿಲ್ಲೆಯ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿದೆ.
ಅಂದಾಜು 2-3 ವರ್ಷದ ಗಂಡಾನೆ ಮರಿ ಮತ್ತೇ ಅಮ್ಮನ ಮಡಿಲು ಸೇರಿದ್ದು ಸದ್ಯ ಅರಣ್ಯ ಇಲಾಖೆ ಮರಿ ಮೇಲೆ ನಿರಂತರ ನಿಗಾ ಇಟ್ಟಿದೆ. ಬೇತಾಳಕಟ್ಟೆಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ಇಲಾಖಾ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಜಯಣ್ಣ ಎಂಬುವವರ ಜಮೀನಿನ ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರ ದಿಂದ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮರಿ ಅರಸುತ್ತಾ ಬಂದ ತಾಯಿ ಆನೆ ಚಿಕಿತ್ಸೆ ಕೊಡಲು ಬಂದಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಹರಸಾಹಸದಿಂದ ಆ್ಯಂಟಿಬಯೋಟಿಕ್, ಕಬ್ಬಿನ ಜಲ್ಲೆ ಗಳು, ಹಸಿ ಕೊಟ್ಟು ಆರೈಕೆ ಮಾಡಿದ್ದರು.
ಅಮ್ಮನ ಮಡಿಲಿಗೆ ಮರಿಯನ್ನು ಒಪ್ಪಿಸಿದ್ದಾರೆ. ಜೊತೆಗೆ, 24 ತಾಸು ಕೂಡ ಮರಿ ಮೇಲೆ ನಿಗಾ ಇಡಲು ಬಿಆರ್ಟಿ ಅರಣ್ಯ ಇಲಾಖೆ ಕ್ರಮ ಆರೈಕೆ ಮುಂದುವರೆಸಿ ಮರಿಚೇತರಿಸಿಕೊಳ್ಳುತ್ತಿದ್ದಂತೆ ಕೈಗೊಂಡಿದೆ.

