ಗುಂಡ್ಲುಪೇಟೆ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದ್ದ ಗುಂಡ್ಲುಪೇಟೆ ಪಟ್ಟಣದ ಗಣ್ಯ ವ್ಯಕ್ತಿಗಳ ಅತಿಥಿಗೃಹದ ಬಾಗಿಲುಗಳು ಗೆದ್ದಿಲು ಹತ್ತಿರುವ ಸ್ಥಿತಿಯಲ್ಲಿವೆ, 2014 ರಲ್ಲಿ ಸಿದ್ದರಾಮಯ್ಯ ಅವರಿಂದಲೇ ಶಂಕುಸ್ಥಾಪನೆಗೊಂಡಿದ್ದ ಕಟ್ಟಡವು 2017 ರಲ್ಲಿ ಉದ್ಘಾಟನೆ ಭಾಗ್ಯ ಕಂಡಿತ್ತು, ಸುಮಾರು ಒಂದೂವರೆ ಕೋಟಿ ವೆಚ್ಚದ ಸುಸಜ್ಜಿತ ಕಟ್ಟದಲ್ಲಿನ ಕಿಟಕಿ ಬಾಗಿಲುಗಳು ಗೆದ್ದಿಲು ಹಿಡಿದಿರುವ ಸ್ಥಿಥಿಗೆ ತಲುಪಿರುವುದು ಆತಂಕಕಾರಿ ಸಂಗತಿ ರೈತ ಮುಖಂಡ ಶಿವಪುರ ಮಹದೇವಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ನಿರ್ವಹಣೆ ಕೊರತೆಯೋ ಅಥವಾ ಕಳಪೆ ಕಾಮಗಾರಿಯೋ ಏನೋ, ಕಟ್ಟಡದ ಬಾಗಿಲುಗಳಲ್ಲಿ ಕಿಟಕಿಗಳಲ್ಲಿ ಗೆದ್ದಿಲು ಹಿಡಿದಿರುವಂತದ್ದು ಮಾತ್ರ ಸತ್ಯ, ಹೊರಗೆ ಐಷಾರಾಮಿ ಕಟ್ಟಡ ರೂಪವಿದ್ರು ಒಳಗೆ ಪ್ರವೇಶಿಸಿ ಸೂಕ್ಷ್ಮವಾಗಿ ಗಮನಿಸುತ್ತಾ ಹೋದ್ರೆ ಸ್ನಾನ ಗೃಹದ ಬಾಗಿಲು ಗೆದ್ದಿಲು ಹಿಡಿದು ಕಿತ್ತು ಬಿದ್ದಿದೆ.
ಇನ್ನೂ ಹೊರಾಂಗಣದ ಬಾಗಿಲು ಸಹ ಗೆದ್ದಿಲು ಸ್ಥಿತಿ ತಲುಪಿದೆ, ಒಂದೂವರೆ ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣವಾದ್ರೂ ಸಹ ಪೀಠೋಪಕರಣಗಳು ಕಳಪೆಯಾಗಿವೆ ಅನ್ನೋದಕ್ಕೆ ಈ ದ್ರಶ್ಯಗಳೇ ಸಾಕ್ಷಿಯಾಗಿವೆ, 2017 ರಲ್ಲೇ ಉದ್ಘಾಟನೆಗೊಂಡ ಕಟ್ಟಡ ಬಳಕೆಗೆ ಬಂದಿದ್ದು ಮಾತ್ರ 2021 ರಲ್ಲಿ , ಆದ್ರೆ ಇಷ್ಟು ಬೇಗನೆ ಬಾಗಿಲುಗಳು ಕಿಟಕಿಗಳು ದುರಸ್ತಿಗೆ ಬಂದಿರುವುದಕ್ಕೆ ಕಾರಣ ಏನು ಅಂತ ಮಹದೇವಪ್ಪ ಪ್ರಶ್ನಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ನಿರ್ವಹಣಾ ಸುಪರ್ದಿಯಲ್ಲಿರುವ ಕಟ್ಟಡ ಇಂತಹ ದುಃಸ್ಥಿತಿಗೆ ತಲುಪಿರುವುದು ವಿಪರ್ಯಾಸ ಆದುರರಿಂದ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

