ಚಾಮರಾಜನಗರ : ಚಾಲಾಕಿ ಹುಡುಗನೋರ್ವ ಗೋಬಿ ಮಂಚೂರಿಯನ್ ಆಸೆಗೆ ಕಿಡ್ನಾಪ್ ಕತೆ ಕಟ್ಟಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಗೋಬಿ ಹಾಗೂ ಐಸ್ ಕ್ರೀಂ ತಿನ್ನುವ ಆಸೆಗೆ ಕಿಡ್ನ್ಯಾಪ್ ಕಥೆಗೆ ಪಾಲಕರು ಶಾಕ್ ಆಗಿ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದರು. ಬಳಿಕ, ತನಿಖೆ ಕೈಗೊಂಡಾಗ ಅಸಲಿ ಕಥೆ ರಿವೀಲ್ ಆಗಿದೆ. ಟ್ಯೂಷನ್ ಗೆ ಬಂಕ್ ಹಾಕಿ ಗೋಬಿ ತಿನ್ನುತ್ತ ಕುಳಿತಿದ್ದ 5ನೇ ತರಗತಿ ವಿದ್ಯಾರ್ಥಿಯ ಫೋಟೋವನ್ನು ನೆರೆ ಮನೆಯವರೊಬ್ಬರು ಕ್ಲಿಕ್ಲಿಸಿದ್ದರು.
ಇದರಿಂದ ಗಾಬರಿಗೊಳಗಾದ ಬಾಲಕ ಅಪಹರಣ ಕಥೆ ಕಟ್ಟಿ-ಶಾಲೆ ಮುಗಿಸಿಕೊಂಡು ಟ್ಯೂಷನ್ ಗೆ ಹೋಗುವಾಗ ನನ್ನನ್ನ ಮೂವರು ಬಂದು ಟ್ಯೂಷನ್ ಗೆ ರಜೆ ಹಾಕು ಇಲ್ಲದಿದ್ದರೆ ಸಾಯಿಸುತ್ತೇನೆಂದು ಹೆದರಿಸಿ, ಬಳಿಕ ಕಾರಿನಲ್ಲಿ ಕೂರಿಸಿಕೊಂಡು ಬಾಯಿಗೆ ಬಟ್ಟೆ ತುರುಕಿ ಪ್ಲಾಸ್ಟರ್ ಹಾಕಿದರು.
ಅರ್ಧ ಗಂಟೆ ಕಾರಿನಲ್ಲಿ ಸುತ್ತಾಡಿಸಿದ್ರು ಬಳಿಕ ಜೋಡಿ ರಸ್ತೆ ಬಳಿ ಇಳಿಸಿ ಬಲವಂತವಾಗಿ ಗೋಬಿ ಐಸ್ ಕ್ರೀಂ ತಿನ್ನಿಸಿದರು, ಪಕ್ಕದ ಮನೆಯ ಆಂಟಿಯನ್ನ ನೋಡಿ ನಾನು ಅವರ ಬಳಿ ಓಡಿಬಂದೆ ಎಂದು ಕಿಡ್ನ್ಯಾಪ್ ಸ್ಟೋರಿ ಹೇಳಿದ್ದ. ಈ ಕುರಿತು ಬಾಲಕನ ತಂದೆ ದೂರು ನೀಡಿದ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ವೇಳೆ ಗೋಬಿ, ಐಸ್ ಕ್ರೀಂ ಆಸೆಗೆ ವಿದ್ಯಾರ್ಥಿಯದ್ದೆ ಕಥೆ ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

