ಗುಂಡ್ಲುಪೇಟೆ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನಾಮಾಂಕಿತ ಬೋರ್ಡ್ ಗಳನ್ನ ಅಳವಡಿಸಿಕೊಂಡಿರುವ ಅರಣ್ಯ ಇಲಾಖೆಯೇ ಬಂಡೀಪುರವನ್ನ ಮಾಲಿನ್ಯಗೊಳಿಸುತ್ತಿರುವ ದೃಶ್ಯ ಇದು, ಇಲ್ಲಿ ಸಪಾರಿಗೆ ಬಳಸುವ ಹತ್ತಾರು ವಾಹನಗಳು ಉಗಿಬಂಡಿಗಳಾಗಿ ಬದಲಾಗಿವೇ ಎಂಬುದಕ್ಕೆ ಈ ಈಚರ್ ವಾಹನ ಉಗುಳುವ ಹೊಗೆಯೇ ಸಾಕ್ಷಿಯಾಗಿದೆ.

ಪ್ರತಿನಿತ್ಯ ಲಕ್ಷಾಂತರ ರೂ ಆದಾಯವಿರುವ ಗುಂಡ್ಲುಪೇಟೆ ತಾಲೂಕಿನ ಪ್ರತಿಷ್ಠಿತ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಪ್ರವಾಸಿಗರನ್ನ ಸಪಾರಿಗೆ ಕರೆದೊಯ್ಯುವ ವಾಹನದ ದುಸ್ಥಿತಿ ಇದು, ಪರಿಸರ ಸಂರಕ್ಷಣೆ ಅಂತ ಭಾಷಣ ಬಿಗಿಯುವ ಅಧಿಕಾರಿಗಳು ಇಂತಹ ಕೆಟ್ಟ ವಾಹನಗಳನ್ನ ಅರಣ್ಯದೊಳಗೆ ಬಳಕೆ ಮಾಡ್ತಿರೋದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಉಗಿಬಂಡಿ ಮಾದರಿಯಲ್ಲಿ ಹೊಗೆಯನ್ನ ಕಾಡಿನೊಳಗೆ ಪಸರಿಸುತ್ತ ತೆರಳುತ್ತಿದ್ದ ಈಚರ್ ನ ದೃಶ್ಯವನ್ನ ಪರಿಸರ ಪ್ರೇಮಿ ನಾಗಾರ್ಜುನ್ ಕುಮಾರ್ ಎಂಬುವವರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅರಣ್ಯ ಇಲಾಖೆಗೆ ಛೀಮಾರಿ ಹಾಕಿದ್ದಾರೆ.

ಪರಿಸರ ಉಳಿಸಿ ಎಂದು ಹೇಳುವ ನೈತಿಕತೆ ಅರಣ್ಯ ಇಲಾಖೆಗಿದಿಯೇ ಎಂದು ಪ್ರಶ್ನಿಸಿದ್ದಾರೆ. ಪರಿಸರ ಸೂಕ್ಶ್ಮ ಪ್ರದೇಶಗಳಿಗೆ ತೆರಳಲು ಇಂತಹ ಡಕೋಟ ವಾಹನಗಳನ್ನ ಬಳಸಬಾರದು ಒಂದು ವೇಳೆ ರಿಪೇರಿ ಕೆಲಸಕ್ಕೆ ಬಂದಿದ್ದರೆ ದುರಸ್ತಿಯಾದ ಬಳಿಕ ಸಪಾರಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡುವ ಮೂಲಕ ಮೊದಲು ಅರಣ್ಯ ಇಲಾಖೆ ಪರಿಸರ ಸಂರಕ್ಷಣೆ ಮಹತ್ವವನ್ನ ಅರಿತುಕೊಳ್ಳಲಿ ಎಂದು ಪರಿಸರ ಪ್ರೇಮಿ ಮಂಜುನಾಥ್ ಸಲಹೆ ನೀಡಿದ್ದಾರೆ.