ಚಾಮರಾಜನಗರ: ಪಟ್ಟಣದಲ್ಲಿ ನಡೆದಿರುವ ಕೊಲೆಯ ಸಂಬಂಧವಾಗಿ ಪಟ್ಟಣ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ರಾಜೇಶ್ ರವರನ್ನು ಅಮಾತುಗೊಳಿಸಿದರೆ ರಾಜ್ಯಾದ್ಯಂತ ದಲಿತ ಸಂಘಟನೆಗಳಿಂದ ಹೋರಾಟ ನಡೆಸಲಾಗುತ್ತದೆ ಎಂದು ದಲಿತ ಮುಖಂಡ ಪಾಪು ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ರಾಜೇಶ್ ಗೂ ಆ ಕೊಲೆಗೂ ಏನು ಸಂಬಂಧ? ಸಂಬಂಧವಿಲ್ಲದ ಕೊಲೆಗೆ ರಾಜೇಶ್ ರವರನ್ನು ಅಮಾನತು ಮಾಡಿದ್ರೆ ನಾವು ಸುಮ್ಮನೆ ಕೂರುವುದಿಲ್ಲ ದಲಿತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಕನ್ನಡಚಳುವಳಿಗಳು ಸೇರಿ ರಾಜ್ಯಾದ್ಯಂತ ಈ ಅನ್ಯಾಯದ ವಿರುದ್ದ ಪ್ರತಿಭಟಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ದಕ್ಷ ಪೊಲೀಸ್ ಅಧಿಕಾರಿಯಾದ ರಾಜೇಶ್ ರನ್ನು ಅಮಾನತು ಮಾಡಬಾರದು ಕೊಲೆ ನಡೆದಿರುವುದು ಪೊಲೀಸ್ ಠಾಣೆಯಲ್ಲಿ ಅಲ್ಲಾ! ಪೊಲೀಸ್ ಠಾಣೆಗೂ ಕೊಲೆ ನಡೆದಿರುವ ಜಾಗಕ್ಕೂ ತುಂಬಾ ದೂರವಿದೆ ಹೀಗಿರುವಾಗ ರಾಜೇಶ್ ರವರನ್ನು ಹೇಗೆ ಅಮಾನತು ಮಾಡುತ್ತಿರೀ ದಲಿತ ಅಧಿಕಾರಿಗಳನ್ನು ಗುರಿಯಾಗಿಸಿ ಸಂಬಂಧವಿಲ್ಲದ ಅರೋಪ ಹೊರಿಸಿ ಅಮಾನತು ಮಾಡಿದರೆ ಹೋರಾಟ ರೂಪಿಸುತ್ತೇವೆ ಎಂದರು. ಈ ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಜನಶಕ್ತಿ ಸುರೇಶ್ ಹಾಜರಿದ್ದರು.

