ಗುಂಡ್ಲುಪೇಟೆ : ಕೋರಿಕೆ ನಿಲುಗಡೆ ಸ್ಥಳದಲ್ಲಿ ಬಸ್ ಗಳನ್ನು ನಿಲ್ಲಿಸದ ಪರಿಣಾಮ‌ ನಿತ್ಯವೂ ತೊಂದರೆ ಅನುಭವಿಸುತ್ತಿದ್ದೇವೆಂದು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಜೆಎಸ್ಎಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.

ಕೆ ಎಸ್ ಆರ್ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿರುವ ವಿದ್ಯಾರ್ಥಿಗಳು ನಮ್ಮ ಶಾಲೆಯು ತೆರಕಣಾಂಬಿಯಿಂದ ಒಂದೂವರೆ ಕಿಮೀ ದೂರವಿದ್ದು ಸಾರಿಗೆ ನಿಗಮಕ್ಕೆ ಕೋರಿಕೆ ನಿಲುಗಡೆ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ‌. ಆದರೂ, ಬಸ್ ಗಳು ಖಾಲಿ ಇದ್ದರೂ  ನಿಲ್ಲಿಸುತ್ತಿಲ್ಲ ಎಂದು ದೂರಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ಬರಲು ಮತ್ತು ಶಾಲೆಯಿಂದ  ತೆರಳಲು ಚಾಮರಾಜನಗರ, ಗುಂಡ್ಲುಪೇಟೆ ಕಡೆಯತ್ತ ಬಸ್ ತೆರಳುವ ಬಸ್ ಗಳು ನಿಲುಗಡೆ ಮಾಡದ ಪರಿಣಾಮ ತೀವ್ರ ತೊಂದರೆಯಾಗಿದೆ,‌ ಇನ್ನಾದರೂ ಸಾರಿಗೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.