ಚಾಮರಾಜನಗರ: ಆಷಾಡ ಮಾಸದ ಹುಣ್ಣಿಮೆಯ ದಿನದಂದು ಚಾಮರಾಜನಗರದಲ್ಲಿ ಶ್ರೀಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವ ಗುರುವಾರ ಪೂರ್ವಾಹ್ನ 12.15 ಕ್ಕೆ ಚಾಲನೆಗೊಂಡಿತು.
ಚಾಮರಾಜೇಶ್ವರ ರಥೋತ್ಸವ ಅಂಗವಾಗಿ ಲಕ್ಷ ಮಂದಿ ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸೂಚನೆಯ ಮೇರೆಗೆ ಪೊಲೀಸ್ ಬಂದೂ ಬಸ್ತ್ ಮಾಡಲಾಗಿತ್ತು. ಪ್ರಮುಖ ರಸ್ತೆ ಹಾಗೂ ಇನ್ನಿತರ ಕಡೆಗಳಲ್ಲಿ ಅನ್ನ ಸಂತರ್ಪಣೆ ನಡೆಯಿತು.
ರಥೋತ್ಸವ ದಲ್ಲಿ ನವ ದಂಪತಿಗಳ ಕಲರವ ಹೆಚ್ಚಾಗಿ ಕಂಡುಬಂತು. ಕಂಕಣ ಹಾಗೂ ಸಂತಾನ ಭಾಗ್ಯ ಕರುಣಿಸುವ ಶ್ರೀ ಚಾಮರಾಜೇಶ್ವರ ಸ್ಮರಣೆ ಎಲ್ಲಡೆ ಕಂಡು ಬಂತು. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪನಾಗ್, ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ನಗರಸಭೆ ಅಧ್ಯಕ್ಷ ಸುರೇಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

