Bengaluru 29°C
Ad

ದೇವಸ್ಥಾನದ ಬಳಿ ಬಾರಿ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿದ ಸ್ನೇಕ್ ಪ್ರಸಾದ್

ಯಳಂದೂರು ತಾಲ್ಲೂಕಿನ ಅಲ್ಕೆರೆ ಅಗ್ರಹಾರ ಗ್ರಾಮದ ಶಿವನ ದೇವಸ್ಥಾನದ ಸಮೀಪ ನಿಂಗರಾಜು ಎಂಬವರ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು, ಜನರು ಭಯಬಿತಾರಾಗಿದ್ದರು

ಚಾಮರಾಜನಗರ : ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಲ್ಕೆರೆ ಅಗ್ರಹಾರ ಗ್ರಾಮದ ಶಿವನ ದೇವಸ್ಥಾನದ ಸಮೀಪ ನಿಂಗರಾಜು ಎಂಬವರ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು, ಜನರು ಭಯಬಿತಾರಾಗಿದ್ದರು.

ಯಳಂದೂರಿನ ಉರಗ ತಜ್ಞ ಸ್ನೇಕ್ ಪ್ರಸಾದ್ ರವರಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ ಕೂಡಲೇ ಸ್ನೇಕ್ ಪ್ರಸಾದ್ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ರಕ್ಷಿಸಿದ್ದಾರೆ. ಸುಮಾರು 12 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿ, ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯ ಬಿ. ಆರ್. ಟಿ. ಹುಲಿ ರಕ್ಷಿತಾ ಅರಣ್ಯದ ಅಮೇಕೇರೆ ಬಳಿ ಕಾಡಿನ ಒಳಗಡೆ ಅರಣ್ಯ ಇಲಾಖೆ ಜೊತೆಗೂಡಿ ಸುರಕ್ಷಿತವಾಗಿ ಬಿಡಲಾಗಿದೆ.

Ad
Ad
Nk Channel Final 21 09 2023
Ad