ಗುಂಡ್ಲುಪೇಟೆ : ತಾಲೂಕಿನ ಕೆಲಸೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಶಾಲಾ ವಾಹನ ಮಗುಚಿ ಬಿದ್ದು ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪಟ್ಟಣದ ರೇಡಿಯಂಟ್ ಶಾಲೆಯ ಮೂವರು ಮಕ್ಕಳು ಘಟನೆಯಲ್ಲಿ ಗಾಯಗೊಂಡಿದ್ದಾರೆ, ಗುಂಡ್ಲುಪೇಟೆ ಯಿಂದ ಕೆಲಸೂರು ಮಾರ್ಗವಾಗಿ ಮಲ್ಲಮ್ಮನಹುಂಡಿ, ಬೆರಟಹಳ್ಳಿ, ಮೂಡಗೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ವಿಷಯ ತಿಳಿದು ಸ್ಥಳೀಯರು ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ನಂತರ ಶಾಲಾ ಆಡಳಿತ ಮಂಡಳಿಯವರ ಮಾಹಿತಿ ಮೇರೆಗೆ ಪೋಷಕರು ಸಾರ್ವಜನಿಕರ ಆಸ್ಪತ್ರೆಗೆ ಆಗಮಿಸಿ, ಚಿಕಿತ್ಸೆ ನಂತರ ಮಕ್ಕಳನ್ನು ಜತೆಯಲ್ಲಿ ಕರೆದೊಯ್ದಿದ್ದಾರೆ. ಈ ಸಂಬಂಧ ಯಾವುದೇ ಕೇಸು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

