ಚಾಮರಾಜನಗರ: ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ರು ಪ್ರಯೋಜನವಾಗಲಿಲ್ಲ ಇತ್ತ ಗ್ರಾಮಪಂಚಾಯತಿ ಆಡಳಿತ ಮಂಡಳಿಯವರು ರಸ್ತೆ ನಿರ್ಮಾಣ ಮಾಡಿಕೊಡಲು ಮನಸ್ಸು ಮಾಡದ ಹಿನ್ನೆಲೆ ಬೇಸತ್ತ ಬೆಟ್ಟದ ಕಾಡುಹೊಲ ಗ್ರಾಮಸ್ಥರು ಸ್ವಂತ ಖರ್ಚಿನಲ್ಲೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಹನೂರು ತಾಲೂಕಿನ ಮಾದಪ್ಪನ ಸನ್ನಿಧಿಗೆ ತೆರಳಿದ ಭಕ್ತವೃಂದ ಪುಣ್ಯಕ್ಷೇತ್ರ ಕೋಡುಗಲ್ಲುಗೆ ಹೋಗಲು ಇದೆ ಗ್ರಾಮದ ಹಾದಿಯ ಮೂಲಕವೇ ತೆರಳಬೇಕು, ಹಾಗೆಯೇ ಈ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ ಹಾಗೆಯೇ ಪ್ರತಿನಿತ್ಯ ಮಹದೇಶ್ವರ ಬೆಟ್ಟಕ್ಕೆ ನಿತ್ಯ ಕೂಲಿಗಾಗಿ ಬಂದು ಹೋಗುತ್ತಾರೆ ಮಕ್ಕಳು ಸಹ ಬೆಟ್ಟಕ್ಕೆ ಶಾಲಾ ಕಾಲೇಜಿಗೆ ಹೋಗ್ತಾರೆ ಇಂತಹ ಸನ್ನಿವೇಶದಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.
ತುರ್ತು ಸಂಧರ್ಭದಲ್ಲಿ ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್ ಬರುವುದಕ್ಕೂ ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಆದುದರಿಂದ ಚುನಾಯಿತ ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸಿ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಸಮಾಜ ಸೇವಕ ಸ್ನೇಹಜೀವಿ ರಾಜ್ ಮನವಿ ಮಾಡಿದ್ದಾರೆ.

