ಗುಂಡ್ಲುಪೇಟೆ : ತಾಲೂಕಿನ ಇತಿಹಾಸ ಪ್ರಸಿದ್ದ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಸನಿಹದಲ್ಲೇ ಕಾಣಿಸಿಕೊಂಡ ಬಾರಿ ಗಾತ್ರದ ಹೆಬ್ಬಾವನ್ನ ರಕ್ಷಣೆ ಮಾಡುವ ಮೂಲಕ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ದೇಗುಲದ ಸಮೀಪ ಆಗಾಗ್ಗೆ ಕಾಣಿಸಿಕೊಳ್ತಿದ್ದ ಹೆಬ್ಬಾವನ್ನ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ದೇವಸ್ಥಾನದ ಸಮೀಪವೇ ಬಾರಿ ಗಾತ್ರದ ಹೆಬ್ಬಾವನ್ನ ಕಂಡ ಭಕ್ತಾಧಿಗಳು ಆತಂಕಗೊಂಡಿದ್ದರು, ರಕ್ಷಣೆ ಮಾಡಿದ ಹೆಬ್ಬಾವನ್ನ ಸುರಕ್ಷಿತವಾಗಿ ಅರಣ್ಯದೊಳಗೆ ಬಿಡಲಾಗಿದೆ.

