ಗುಂಡ್ಲುಪೇಟೆ : ಓಪಿಡಿ ಚೀಟಿ ಪಡೆದುಕೊಳ್ಳಲು ಹೊರರೋಗಿಗಳು ಸರತಿ ಸಾಲಿನಲ್ಲಿ ನಿಂತಿದ್ದು ಸಕಾಲಕ್ಕೆ ಚಿಕಿತ್ಸೆ ಸಿಗದೆ ನರಳಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ಮೌನಕ್ಕೆ ಶರಣಾಗಿರುವುದಕ್ಕೆ ರೋಗಿಗಳ ಸಂಬಂಧಿಗಳು ಆಕ್ರೋಶ ಹೊರಹಾಕಿದ್ದಾರೆ.
ಈ ದೃಶ್ಯ ಕಂಡುಬಂದಿದ್ದು ಗುಂಡ್ಲುಪೇಟೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಓಪಿಡಿ ಚೀಟಿ ಪಡೆಯಲು ಗಂಟೆಗಟ್ಟಲೆ ನಿಲ್ಲುವ ದುಸ್ಥಿತಿ ಎದುರಾಗಿದೆ, ಬೆಳೆಗ್ಗೆಯಿಂದಲೂ ಕ್ಯೂನಲ್ಲಿ ನಿಂತರೂ ಸಹ ಸಕಾಲಕ್ಕೆ ವೈದ್ಯರು ಸಿಗ್ತಾರೆ ಅನ್ನೋ ನಂಬಿಕೆನೆ ಇಲ್ಲ ಅಂತಾರೆ ರೋಗಿಗಳ ಸಂಬಂದಿಕರು, ಪ್ರಶ್ನೆ ಮಾಡಿದ್ರೆ ಸಿಬ್ಬಂದಿಗಳ ಕೊರತೆ ಎಂಬ ಸಬೂಬು ಹೇಳ್ತಾರೆ ಅಂತ ಆಕ್ರೋಶಿತರಾಗಿದ್ದಾರೆ.

ಈಗಾಗಲೇ ಹವಾಮಾನ ವೈಪರೀತ್ಯದಿಂದ ಜ್ವರ ಸೀತ ಇನ್ನಿತರ ಖಾಯಿಲೆಗಳಿಗೆ ತುತ್ತಾಗಿರುವ ರೋಗಿಗಳು ಹೆಚ್ಚಾಗಿ ಬರುವುದರಿಂದ ಇರುವ ಎರಡು ಓಪಿಡಿಯಲ್ಲಿ ಚೀಟಿ ಪಡೆಯಲು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಇನ್ನೊಂದೆಡೆ ಚೀಟಿ ಪಡೆದು ವೈದ್ಯರನ್ನ ಸಂಪರ್ಕ ಮಾಡುವಷ್ಟರೊಳಗೆ ಊಟದ ಸಮಯ ಎಂದು ಅಲಭ್ಯವಾಗ್ತಾರೆ ಅಂತ ಅಸಮಾಧಾನ ಹೊರಹಾಕಿದ್ದು ಹೆಚ್ಚುವರಿ ಸಿಬ್ಬಂದಿಗಳನ್ನ ನೇಮಕ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

