ಚಾಮರಾಜನಗರ: ಕಸಾಯಿಖಾನೆಗೆ ಅಕ್ರಮವಾಗಿ ಕಂಟೈನರ್ ನಲ್ಲಿ ಸಾಗಿಸುತ್ತಿದ್ದ 2 ಎತ್ತು, ಒಂದು ಹಸು, 15 ಎಮ್ಮೆ, ಒಂದು ಕೋಣ ಸೇರಿ ಒಟ್ಟು 19 ಜಾನುವಾರುಗಳನ್ನು ರಕ್ಷಣೆ ಮಾಡಿದ್ದು ಈ ಸಂಬಂಧ ಚಾಲಕ ಮೈಸೂರಿನ ಉದಯಗಿರಿ ನಿವಾಸಿ ಅತೀಕ್‌ನನ್ನು ಬಂಧಿಸಲಾಗಿದೆ.

ಕಸಾಯಿಖಾನೆಗೆ ಸಾಗಣೆ ಮಾಡುವ ಉದ್ದೇಶದಿಂದ ಕಂಟೈನರ್‌ನಲ್ಲಿ 19 ಜಾನುವಾರುಗಳನ್ನು ಅಕ್ರಮವಾಗಿ ಸಾಗಣೆ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ಪಟ್ಟಣ ಠಾಣೆಯ ಪೊಲೀಸರು ನಗರದ ಎಲ್‌ಐಸಿ ಕಚೇರಿ ಬಳಿ ಕಂಟೈನ ‌ರ್ ಅನ್ನು ತಡೆದು ತಪಾಸಣೆ ಮಾಡಿದಾಗ ಜಾನುವಾರುಗಳ ಅಕ್ರಮ ಸಾಗಣೆ ಬೆಳಕಿದೆ ಬಂದಿದೆ.

ಕೂಡಲೇ ಕಂಟೈನರ್ ನಲ್ಲಿ ತುಂಬಿದ್ದ 2 ಎತ್ತು, ಒಂದು ಹಸು, 15 ಎಮ್ಮೆ, ಒಂದು ಕೋಣ ಸೇರಿ ಒಟ್ಟು 19 ಜಾನುವಾರುಗಳನ್ನು ರಕ್ಷಣೆ ಮಾಡಿದ್ದು ಕಂಟೈನರ್ ಚಾಲಕ ಅತೀಕ್‌ನನ್ನು ಬಂಧಿಸಲಾಗಿದೆ. ಮೈಸೂರು ಚಾಮರಾಜನಗರ ಮೂಲಕ ತಮಿಳುನಾಡು ಅಥವಾ ಕೇರಳದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.