ಚಾಮರಾಜನಗರ : ಬಾಳೆ ಬೆಳೆದವರ ಬಾಳು ಬಂಗಾರ ಎಂಬ ಮಾತು ಯಾಕೋ ಈಗೀಗ ಸುಳ್ಳಾಗುತ್ತಿದ್ದು ಬಾಳೆ ಬೆಲೆ ಪಾತಾಳಕ್ಕೆ ಇಳಿದ ಪರಿಣಾಮ ರೈತ ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ‌.

ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ ರೈತ ಕುಮಾರಸ್ವಾಮಿ ತಮ್ಮ 4 ಎಕರೆ ಜಮೀನಿನಲ್ಲಿ ಪಚ್ಚಬಾಳೆ ಬೆಳೆದಿದ್ದು ಬೆಲೆ ಇಲ್ಲದಿದ್ದರಿಂದ ಕೊಳ್ಳುವವರಿಲ್ಲದೆ ಜಮೀನಿನಲ್ಲೇ ಗೊನೆ ಕೊಳೆಯುತ್ತಿದೆ.

ಜಿ‌.9 ತಳಿಯ ಬಾಳೆ ಬೆಳೆ ಹುಲುಸಾಗಿ ಜಮೀನಿನಲ್ಲಿ ಬೆಳೆದಿವೆ, ಗೊನೆಗಳು ಕಟಾವಿಗೆ ಬಂದಿವೆ. ಆದರೆ  ಬೆಲೆ ಇಲ್ಲದೆ ಕೇಳುವವರು ಇಲ್ಲದಂತಾಗಿ ಹಣ್ಣಾಗಿ  ಉದುರುತ್ತಿದೆ. 4-5 ಲಕ್ಷ ರೂ. ವೆಚ್ಚ ಮಾಡಿ  ಬಾಳೆ ಬೆಳೆದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಬಾಳೆ ಫಸಲನ್ನು ರೊಟವೇಟರ್ ಮಾಡುತ್ತೇನೆ ಎಂದು ರೈತ ಕಣ್ಣೀರಾಗಿದ್ದಾರೆ.