ಗುಂಡ್ಲುಪೇಟೆ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಸಹ ರಾಜಕಾರಣ ಮಾಡಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಗುಂಡ್ಲುಪೇಟೆಯಲ್ಲಿ ಮಾದ್ಯಮದವರೊಟ್ಟಿಗೆ ಮಾತನಾಡುತ್ತ ಎಸ್ ಐ ಟಿ ಯವರು ತನಿಖೆ ನಡೆಸುತ್ತಿರುವ ವೇಳೆ ರಾಜಕಾರಣ ಸಲ್ಲದು ಎಂದರು.

ಗುಂಡ್ಲುಪೇಟೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು ತನಿಖೆ ಪ್ರಗತಿಯಲ್ಲಿರುವಾಗ ರಾಜಕಾರಣ ಮಾಡಬಾರದು, ತನಿಖೆ ಅಂತಿಮ ಘಟ್ಟ ತಲುಪಲು ಬಿಟ್ರೆ ಸತ್ಯಾಸತ್ಯತೆ ಹೊರಬೀಳಲಿದೆ ಇದರಲ್ಲಿ ಧಾರ್ಮಿಕ ವಿಚಾರಗಳನ್ನ ಎಳೆದು ತರಬಾರದು ಎಂದರು.

ಎಸ್ ಐ ಟಿ ತನಿಖೆ ಸರ್ಕಾರದ ಸೂಚನೆಯಂತೆ ನಡೆಯೋದಿಲ್ಲ ,ಮಧ್ಯಂತರ ವರದಿ ನೀಡುವ ಬಗ್ಗೆ ಅಧಿಕಾರಿಗಳು ತೀರ್ಮಾನ ಮಾಡ್ತಾರೆ, ತನಿಖೆಗೆ ವಿರಾಮ ಹೇಳುವುದು ತನಿಖಾ ತಂಡಕ್ಕೆ ಬಿಟ್ಟ ವಿಚಾರವಾಗಿದೆ ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ, ತನಿಖಾಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಬಿಡಬೇಕು ಹಸ್ತಕ್ಷೇಪ ಮಾಡುವುದು ಸರಿಯಲ್ಲ, ಈ ಕುರಿತಂತೆ ಮುಖ್ಯಮಂತ್ರಿಗಳು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ವಿಚಾರವು ರಾಜಕೀಯ ದಿಕ್ಕೆಗೆ ಹೋಗಬಾರದು ಇದು ನನ್ನ ಅಭಿಪ್ರಾಯವಾಗಿದೆ ಎಂದು ತಿಳಿಸಿದರು. ಮುಸುಕುದಾರಿ ತೋರಿಸಿದ ಎಲ್ಲಾ ಸ್ಥಳಗಳಲ್ಲೂ ಪರಿಶೀಲನೆ ನಡೆಸಲು ಸಾಧ್ಯವಿಲ್ಲ , ಶೀಘ್ರದಲ್ಲೇ ಅಧಿಕಾರಿಗಳು ಒಂದು ನಿರ್ದಾರಕ್ಕೆ ಬರಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.