ಚಾಮರಾಜನಗರ: ವಿಷಪ್ರಾಶನ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪದಡಿ ಡಿಸಿಎಫ್ ಅಮಾನತು ಮಾಡಲಾಗಿದೆ.
ಮಲೆಮಹದೇಶ್ವರ ಬೆಟ್ಟದ ವನ್ಯ ಜೀವಿಧಾಮದಲ್ಲಿ ನಡೆದಿದ್ದ 5 ಹುಲಿ ಸಾವು ಕೇಸ್ ನಲ್ಲಿ ಐಎಫ್ಎಸ್ ಅಧಿಕಾರಿ ಚಕ್ರಪಾಣಿ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ ಆಗಿದ್ದರು.ಈ ಹಿಂದೆ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಚಕ್ರಪಾಣಿ ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆ. ಸರ್ಕಾರದಿಂದ ಕಠಿಣ ಕ್ರಮ ವಹಿಸಲಾಗಿದೆ.
ದೇಶಾದ್ಯಂತ ದೊಡ್ಡ ಸದ್ದು ಮಾಡಿದ್ದ ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಸಾಬೀತಾಗಿದೆ. ಈಗಾಗಲೇ ವಿಷ ಹಾಕಿದವರು ಜೈಲು ಪಾಲಾಗಿದ್ದಾರೆ. ಪ್ರಾಥಮಿಕ ವರದಿಯಲ್ಲಿ ವಿಷ ಪ್ರಾಶನದಿಂದಲೇ ಸಾವು ಎಂಬ ವರದಿ ಬಹಿರಂಗವಾಗಿದೆ.

