ಚಾಮರಾಜನಗರ : ಐದು ಲಕ್ಷ ಲೋನ್ ನೀಡುತ್ತೇವೆ ಎಂದು ನಂಬಿಸಿದ ಧನಿ ಕ್ಯಾಪಿಟಲ್ ಆನ್ ಲೈನ್ ಫೈನಾನ್ಸ್ ಯುವಕನೊರ್ವನಿಂದ 2 ಲಕ್ಷದ 38 ಸಾವಿರ ಹಣವನ್ನ ಮುಂಗಡವಾಗಿ ಪಡೆದು ವಂಚಿಸಿದ ಹಿನ್ನೆಲೆ ಹಣ ಕಳೆದುಕೊಂಡ ಯುವಕ ರಾಜಪ್ಪ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ.

ಆನ್ ಲೈನ್ ಲೋನ್ ಆಪ್ ವಂಚನೆ ಕುರಿತಾಗಿ ಸೆಲ್ಫಿ ವಿಡಿಯೋ ಮಾಡಿರುವ ಯುವಕ ರಾಜಪ್ಪ ನನ್ನ ಸಾವಿಗೆ ನೇರ ಕಾರಣ ಧನಿ ಆಫ್ ನ ಸಿದ್ದಚಿರಂಗನ್ ಹಾಗೂ ಅನಂತ್ ಲೋಹ ಎಂಬವರಾಗಿರುವುದಾಗಿ ತಿಳಿಸಿದ್ದಾನೆ.

ನನ್ನ ಸಾವಿನ ನಂತರ ನನ್ನ ಮನೆಯವರಿಗೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದಾನೆ. ಘಟನಾ ಸಂಬಂದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.