ಚಾಮರಾಜನಗರ : ಹುಲಿಗಳಿಗೆ ವಿಷಪ್ರಾಶನ ಪ್ರಕರಣದಲ್ಲಿ ಓರ್ವನ ಬಂಧನ ಮಾಡಿರುವ ಘಟನೆ ನಡೆದಿದೆ. ಮಹದೇಶ್ವರ ಬೆಟ್ಟದ ದುಷ್ಕರ್ಮಿಯನ್ನ ಅರಣ್ಯ ಇಲಾಖೆ ಎಡೆಮುರಿಕಟ್ಟಿದೆ.

ಬೆಟ್ಟದ ಕಳ್ಳಬ್ಬೆದೊಡ್ಡಿಯ ಶಿವಣ್ಣ ಎಂಬಾತನ ಬಂಧನ ಮಾಡಲಾಗಿದೆ. ಪುತ್ರನ ಜೊತೆಗೂಡಿ ಹುಲಿಗಳಿಗೆ ದುರುಳರು ವಿಷವಿತ್ತಿದ್ದರು. ಹಸುಗಳ ಮೇಲೆ ದಾಳಿ ನಡೆಸಿದೆ ಎಂದು ಅಪ್ಪ ಮಗ ಸೇಡು ತೀರಿಸಿಕೊಳ್ಳಲು ಮುಂದಾದರು. ತಂದೆಯನ್ನ ಬಂಧಿಸುತ್ತಿದ್ದಂತೆ ಪುತ್ರ ಎಸ್ಕೇಪ್ ಆಗಿದ್ದಾನೆ ಆತನಿಗಾಗಿ ಶೋಧ ನಡೆಯುತ್ತಿದೆ.