ಗುಂಡ್ಲುಪೇಟೆ: ಗಾಂಧಿಗ್ರಾಮ ಪುರಸ್ಕಾರ ಪಂಚಾಯಿತಿಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಹಂಗಳ ಗ್ರಾಮಪಂಚಾಯತಿಯಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ. ಈ ಪಂಚಾಯಿತಿ ಅವ್ಯವಸ್ಥೆ ಒಂದಲ್ಲ ಎರಡಲ್ಲ. ಬೆಳೆಗ್ಗೆ 11 ಗಂಟೆಯಾದ್ರು ಪಂಚಾಯಿತಿ ಸಿಬ್ಬಂದಿಗಳು ಕಚೇರಿಗೆ ಬರುವುದಿಲ್ಲ.

ಸಾರ್ವಜನಿಕರೆ ಬಂದು ಕೆಲಸಗಳಿಗಾಗಿ ಕಾಯುವಂತ ದುಸ್ಥಿತಿ ಎದುರಾಗಿದೆ. ಸ್ಥಳೀಯರಿಂದಲೇ ಪಂಚಾಯಿತಿ ಆಡಳಿತ ವ್ಯವಸ್ಥೆ ಬಯಲಾಗಿದೆ. ಸ್ವಚ್ಛತಾ ಸಿಬ್ಬಂದಿಗಳ ಕೊರತೆ ಇದೆ. ಓರ್ವ ಸಿಬ್ಬಂದಿಯಿಂದಲೇ ಸ್ವಚ್ಚತೆ ಕಾರ್ಯ ಮಾಡಿಸಲಾಗುತ್ತಿದೆ.

ಪಂಚಾಯತಿಗೆ ಇರೋದು ಒಬ್ಬನೇ ಸ್ವಚ್ಛತಾ ಸಿಬ್ಬಂದಿ ಆದ್ರೆ ಬಿಲ್ ಐದಾರು ಮಂದಿಗೆ ಮಾಡುತ್ತಾರೆ. ಗ್ರಾಮಪಂಚಾಯಿತಿ ಸನಿಹದಲ್ಲೇ ಅಶುಚಿತ್ವ, ಅಲ್ಲಲ್ಲಿ ಮದ್ಯದ ಬಾಟಲಿಗಳು ಬಿದ್ದಿದೆ. ಶಾಲೆಯಲ್ಲೂ ಸಹ ಶುಚಿತ್ವಕ್ಕೆ ಎಡೆಯಿಲ್ಲ, ಶೌಚಾಲಯಗಳು ಗಬ್ಬೆದ್ಫು ನಾರುತ್ತಿದೆ. ಗ್ರಾಮಪಂಚಾಯತಿ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿದೆ.

