ಚಾಮರಾಜನಗರ : ಕರ್ನಾಟಕ ತಮಿಳುನಾಡು ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಯೊಂದು ಕಬ್ಬು ಸಾಗಾಣಿಕೆ ಲಾರಿಯ ಬಳಿ ತೆರಳಿ ಕಬ್ಬು ತಿನ್ನಲು ಹೋಗಿ ಕಾರುಗಳನ್ನು ಹೆಮ್ಮೆಟ್ಟಿಸಿದ ಘಟನೆ ತಮಿಳುನಾಡಿನ ಹಾಸನೂರು ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬಿನ ಲಾರಿಗಾಗಿ ಕಾಯುತ್ತಿದ್ದ ಸಲಗ ಇದ್ದಕ್ಕಿದ್ದಂತೆ ಹಾದುಹೋಗುವ ಕಾರುಗಳನ್ನು ಬೆನ್ನಟ್ಟಿದೆ ಆನೆಯ ರಂಪಾಟ ಕಂಡು ಕೆಲಕಾಲ ಭಯಭೀತಿಗೊಳಗಾಗಿದ್ದರು.
ಹಾಸನೂರು ಸಮೀಪ ಎಂದಿನಂತೆ ರಸ್ತೆಗೆ ಬಂದಿದ್ದ ಒಂಟಿಯಾನೆ ಕಬ್ಬು ಸಾಗಿಸುತ್ತಿದ್ದ ಲಾರಿಯ ಬಳಿ ತೆರಳಲು ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳ ಮೇಲೆ ದಾಳಿಗೆ ಮುಂದಾಗಿ ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನ ಹಿಮ್ಮೆಟ್ಟಿಸಿದೆ, ಒಂಟಿಯಾನೆ ರಂಪಾಟ ಕಂಡು ಬೆದರಿದ ಸವಾರರು ಹಿಂದಕ್ಕೆ ಸರಿಯಬೇಕಾಯಿತು.

