ಗುಂಡ್ಲುಪೇಟೆ : ಗಾಂಧಿ ಜಯಂತಿ ದಿನದಂದು ಮದ್ಯ, ಮಾಂಸ ಮಾರಾಟ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ ಇದಾವುದನ್ನೂ ಲೆಕ್ಕಿಸದೆ ಗುಂಡ್ಲುಪೇಟೆ ​ ಸ್ಟಾಲೊಂದರಲ್ಲಿ ಮಾಂಸ ಮಾರಾಟ ನಡೆದಿದೆ.

ಮಹಾತ್ಮಗಾಂಧಿ ಜನ್ಮದಿನಾಚಾರಣೆ ನಿಮಿತ್ತ ಮದ್ಯ ಹಾಗೂ ಮಾಂಸ ಮಾರಾಟವನ್ನ ನಿಷೇಧಿಸಲಾಗಿದೆ ಆದರೆ ಗುಂಡ್ಲುಪೇಟೆ ಪಟ್ಟಣದ ಅಂಗಡಿಯೊಂದರಲ್ಲಿ ರಾಜಾರೋಷವಾಗಿ ಮಾಂಸ ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಅಹಿಂಸಾವಾದಿ ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ ದೇಶಾದ್ಯಂತ ಮದ್ಯ ಹಾಗೂ ಮಾಂಸ ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ ಆದರೆ ಗುಂಡ್ಲುಪೇಟೆ ಹಳೆ ಆಸ್ಪತ್ರೆ ರಸ್ತೆಯ ಅಂಗಡಿಯೊಂದರಲ್ಲಿ ಮಾಂಸ ಮಾರಾಟ ನಡೆಯುತಿದ್ರು ಸಹ ಪುರಸಭಾ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ವಕೀಲ ರವಿ ಆರೋಪಿಸಿದ್ದಾರೆ.

ಒಂದು ದಿನದ ಮಟ್ಟಿಗೆ ಗೌರವ ಸಲ್ಲಿಸಲು ಎಲ್ಲಾ ಮದ್ಯದಂಗಡಿ ಹಾಗೂ ಮಟನ್ ಚಿಕನ್ ಸ್ಟಾಲ್ ಗಳು ಬಂದ್ ಆಗಿದ್ರು ಹಳೆ ಆಸ್ಪತ್ರೆ ರಸ್ತೆಯ ತಾಜ್ ಚಿಕನ್ ಅಂಗಡಿಯಲ್ಲಿ ಮಾಂಸ ಮಾರಾಟ ನಡೆಯುತ್ತಿದ್ರು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದ್ದಾರೆ, ಸದ್ಯ ನಿಯಮ ಉಲ್ಲಂಘನೆ ಮಾಡಿರುವ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.