ಚಾಮರಾಜನಗರ : ಜಿಟಿಜಿಟಿ ಮಳೆಗೆ ತಾಯಿಯಿಂದ ಬೇರ್ಪಟ್ಟು ಸರ್ಕಾರಿ ಶಾಲೆಗೆ ಮರಿ ಆನೆಯೊಂದು ಆಕಸ್ಮಿಕವಾಗಿ ಪ್ರವೇಶಿಸಿದ ಘಟನೆ ಗುಂಡ್ಲುಪೇಟೆ ಗಡಿಭಾಗ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.

ಸುಲ್ತಾನ್ ಬತ್ತೇರಿ ತಾಲೂಕು ಪುಲುಪಳ್ಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಶಾಲೆಗೆ ಪುಟ್ಟ ಹೆಜ್ಜೆ ಇಡುತ್ತ ಬಂದ ಮರಿಯಾನೆ ಕಂಡು ಶಾಲಾ ಮಕ್ಕಳು ಸಂತೋಷಗೊಂಡು ಕುಣಿದು ಕುಪ್ಪಳಿಸಿದ್ದಾರೆ.

ಶಾಲೆಗೆ ಅನೇಮರಿ ಎಂಟ್ರಿ ಕೊಟ್ಟಿರುವ ಬಗ್ಗೆ ಮಾಹಿತಿಯನ್ನರಿತ ಕೇರಳ ಅರಣ್ಯ ಇಲಾಖೆ ಮರಿಯಾನೆಯನ್ನ ರಕ್ಷಣೆ ಮಾಡಿದ್ದು ತಾಯಿ ಅನೇಜೊತೆ ಸೇರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.