ಚಾಮರಾಜನಗರ: ತಾಲೂಕಿನ ಕಡುವಿನ ಕಟ್ಟೆಹುಂಡಿ ಗ್ರಾಮದ ರೈತರಿಗೆ ಹಲವು ತಿಂಗಳುಗಳಿಂದ ಉಪಟಳ ನೀಡುತ್ತಿದ್ದ ಚಿರತೆಯನ್ನ ಬಿಆರ್ಟಿ ಅರಣ್ಯಾಧಿಕಾರಿಗಳು ಕೊನೆಗೂ ಸೆರೆ ಹಿಡಿದಿದ್ದಾರೆ.
ಬಿಆರ್ಟಿ ಆರಣ್ಯ ವಲಯದ ಕಡುವಿನ ಕಟ್ಟೆಹುಂಡಿ ಗ್ರಾಮದ ರೈತರನ್ನ ಆತಂಕಕ್ಕೀಡು ಮಾಡಿದ್ದ ಚಿರತೆಯೂ ಕುಮಾರ್ ಎಂಬವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಚಿರತೆ ಉಪಟಳದಿಂದ ಭಯಗೊಂಡಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

