ಗುಂಡ್ಲುಪೇಟೆ : ಚಿರತೆ ದಾಳಿ ನಡೆಸಿ ಕರುವನ್ನು ಹೊತ್ತೊಯ್ದ ತಿಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮರಳಾಪುರದಲ್ಲಿ ನಡೆದಿದೆ.

ಮರಳಾಪುರ ಗ್ರಾಮದ ವೀರಪ್ಪ ಎಂಬವರ ತೋಟದಲ್ಲಿ ಈ ಚಿರತೆ ದಾಳಿ ನಡೆದಿದ್ದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು 500 ಮೀ. ದೂರಕ್ಕೆ ಎಳೆದೊಯ್ದು‌ ತಿಂದು ಹಾಕಿದೆ.

ಚಿರತೆ ಹೆಜ್ಜೆ ಗುರುತುಗಳ ಜೊತೆ ಚಿರತೆ ಮರಿಗಳ ಹೆಜ್ಜೆ ಗುರುತು ಕೂಡ ಇದ್ದು ರೈತರ ಆತಂಕಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟು ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ.

ಚಿರತೆ ಉಪಟಳ ಹೆಚ್ಚಿದ್ದು ಜಮೀನುಗಳಿಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಚಿರತೆ ಸೆರೆ ಹಿಡಿಯಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.