ಗುಂಡ್ಲುಪೇಟೆ : ಪಟ್ಟಣದ ಕೇರಳ ಹೆದ್ದಾರಿಯಲ್ಲಿನ ನಿಸರ್ಗ ಲೇ ಔಟ್ನಲ್ಲಿ ಕಾಣಿಸಿಕೊಂಡಿರುವ ಚಿರತೆ ಸ್ಥಳೀಯ ನಿವಾಸಿಗಳನ್ನ ಭಯಭೀತಿಗೊಳಿಸಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಚಿರತೆ ಬಂಧನಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಬೋನ್ ಇರಿಸಿದೆ.

ಪಟ್ಟಣದ ಕೂಗಳತೆ ದೂರದಲ್ಲೇ ರಾತ್ರಿ ವೇಳೆ ಪ್ರತ್ಯಕ್ಷವಾಗಿದ್ದ ಚಿರತೆ ನಿಸರ್ಗ ಲೇ ಔಟ್ನಲ್ಲೇ ಸಂಚರಿಸುತ್ತಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಎಸಿಎಫ್ ಸುರೇಶ್ ಕುಮಾರ್ ಸೂಚನೆಯ ಮೇರೆಗೆ ಬಡಾವಣೆಯಲ್ಲಿ ಬೋನ್ ಇರಿಸಿ ಚಿರತೆ ಬಂಧನಕ್ಕೆ ಖೆಡ್ಡಾ ಸಿದ್ಧಪಡಿಸಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ಮಾಡುತ್ತಿರುವುದು ಜನತೆಯನ್ನ ಅಚ್ಚರಿಗೊಳಗಾಗುವಂತೆ ಮಾಡಿದೆ.