ಗುಂಡ್ಲುಪೇಟೆ : ಪ್ರಸಿದ್ಧ ಯಾತ್ರಾಸ್ಥಳವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದೆ.
ನಿರಂತರ ಮಳೆ ಹಿನ್ನೆಲೆ ರಸ್ತೆ ಮಧ್ಯೆ ದೊಡ್ಡ ಹಳ್ಳ ರಂದ್ರವಾಗಿದ್ದು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೊಡ್ಡತಿರುವು ಅಥವಾ ರಾಕ್ಷಸ ಬಂಡೆ ಎಂದು ಕರೆಯುವ ಸ್ಥಳದಲ್ಲಿ ಭೂಮಿ ಕುಸಿದಿದ್ದು, ಸ್ಥಳಕ್ಕೆ ಗುಂಡ್ಲುಪೇಟೆ ತಹಸಿಲ್ದಾರ್ ತನ್ಮಯ್, ಅರಣ್ಯ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಭಾನುವಾರದಂದು ಕೂಡ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿನ ತಡೆಗೋಡೆ ಕುಸಿದಿತ್ತು. ಅರಣ್ಯ ಇಲಾಖೆಯು ಜೆಸಿಬಿ ಮೂಲಕ ಕಲ್ಲು- ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಈಗ ದೊಡ್ಡ ತಿರುವಿನಲ್ಲಿ ರಸ್ತೆ ಮಧ್ಯೆಯೇ ಭೂಮಿ ಕುಸಿದಿದ್ದು ಆತಂಕಕ್ಕೆ ಕಾರಣವಾಗಿದೆ. ಮುಂಜಾಗೃತಾ ಕ್ರಮವಾವಿ 29 ಹಾಗೂ 30 ರಂದು ದರ್ಶನಕ್ಕೆ ನಿಷೇಧ ಏರಲಾಗಿದ್ದು ರಸ್ತೆ ದುರಸ್ತಿಯಾದ ಬಳಿಕ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಹಸೀಲ್ದಾರ್ ತನ್ಮಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

