ಚಾಮರಾಜನಗರ : ಬೆಳ್ಳಂ ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಜೆಸಿಬಿ ಘರ್ಜನೆಯಾಗಿ ಸರ್ಕಾರಿ ಸ್ಥಳದಲ್ಲಿ ನಿರ್ಮಾಣವಾಗಿರುವ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಿಂದ ಕುರುಬನಕಟ್ಟೆಗೆ ತೆರಳುವ ವಾರ್ಗದ ಇಕ್ಕಡೆಗಳಲ್ಲಿ ಸರ್ಕಾರಿ ಸ್ಥಳಗಳಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿಕೊಳ್ಳಲಾಗಿತ್ತು.

ಈ ಬಗ್ಗೆ ನಾಗಣ್ಣ ರವರು ಲೋಕಾಯುಕ್ತರಿಗೆ ದೂರು ನೀಡಿ, ಕೊಳ್ಳೇಗಾಲದ ಎಪಿಎಂಸಿ ಬಳಿಯ 10 ಅಂಗಡಿಗಳು ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದು, ತೆರವುಗೊಳಿಸುವಂತೆ ದೂರು ನೀಡಿದ್ದರು.

ಲೋಕಾಯುಕ್ತರಿಂದ ಬಂದು ಸೂಚನೆಯಂತೆ ಕೊಳ್ಳೇಗಾಲದ ತಹಸೀಲ್ದಾರ್ ರವರು ಬುಧವಾರ ಬೆಳಗ್ಗೆ ಜೆಸಿಬಿ ಮೂಲಕ ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಲು ಜೆಸಿಬಿ ಸಮೇತ ಆಗಮಿಸಿದಾಗ ತಹಸೀಲ್ದಾರ್ ಮತ್ತು ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಅಂಗಡಿಗಳ ತೆರವಿಗೆ ತಹಸೀಲ್ದಾರ್ ಮುಂದಾದರು. ಈ ವೇಳೆ ಕೊಳ್ಳೇಗಾಲ ಪೊಲೀಸ್ ಇನ್ಸ್ ಪೆಕ್ಟರ್ ಶಿವಮಾದಯ್ಯ ಹಾಜರಿದ್ದರು.