ಗುಂಡ್ಲುಪೇಟೆ : ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸೋ ವಿಚಾರವಾಗಿ 2024 ರಲ್ಲಿ ಧರಣಿ ನಡೆಸಿದ ವೇಳೆ ಕೆರೆ ತುಂಬಿಸುವ ಭರವಸೆ ನೀಡಿ ತಹಶೀಲ್ದಾರ್ ಹಾಗೂ ಇಂಜಿನಿಯರ್ ಸಹಿ ಹಾಕಿ ಕೊಟ್ಟ ಪತ್ರ ರೈತರ ಬಳಿ ಇದೆ ಆದ್ರೆ ವರ್ಷವಾದ್ರೂ ಕೆರೆ ತುಂಬಿಸುವ ಯಾವ ಲಕ್ಷಣಗಳು ಕಾಣಿಸದಿರೋದು ಬೇಸರದ ಸಂಗತಿಯಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುಂಡ್ಲುಪೇಟೆಯಲ್ಲಿ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕರೆಕೊಟ್ಟಿರುವ ಅಹೋರಾತ್ರಿ ಧರಣಿ ಯಲ್ಲಿ ಪಾಲ್ಗೊಂಡು ಮಾತನಾಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಳೆಯಾಶ್ರಿತ ಪ್ರದೇಶದಲ್ಲಿನ ರೈತರಿಗೆ ಬೇಕಾದ ಸೌಲಭ್ಯ ಒದಗಿಸುವ ಕಡೆಗೆ ಮೊದಲ ಪ್ರಾಮುಖ್ಯತೆ ಕೊಡಬೇಕು, ಪ್ರಸ್ತುತವಾಗಿ ಅಂತರ್ಜಲ ಮಟ್ಟ ಕುಸಿದು ಕುಲಕಸುಬಿಗೆ ದೊಡ್ಡ ಹೊಡೆತ ಬಿದ್ದಿದೆ, ಕೆರೆ ತುಂಬಿಸಲು ಇನ್ನಷ್ಟು ವಿಳಂಭ ಮಾಡಿದ್ದೆಯಾದಲ್ಲಿ ರೈತರು ಸಾಲದ ಸುಳಿಗೆ ಸಿಲುಕುತ್ತಾರೆ ಇದನ್ನ ಅರಿತ ರೈತ ಸಂಘ ಚಳುವಳಿಗಿಳಿದಿರೋದು ಸರಿಯಾಗಿಯೆ ಇದೆ ಎಂದರು.
ಈಗಾಗಲೇ ನಿಷಿದ್ದವಾಗಿರೋ ಆಕ್ರಮ ಸಕ್ರಮ ನಿಯಮದ ವಾಪಾಸ್ಸಾತಿಗೆ ವಿಧಾನ ಸಭೆ ಕಲಾಪದಲ್ಲಿಯು ಆಗ್ರಹ ಮಾಡಿದ್ದೇವೆ , ಸರ್ಕಾರದ ಹೊಸ ನಿಯಮದ ಪ್ರಕಾರ ಹೊಸ ಟಿಸಿಗೆ ಅರ್ಜಿ ಕೊಟ್ಟರೆ ಇನ್ನುಳಿದ ಪರಿಕರಗಳ ಜವಬ್ದಾರಿ ರೈತರಿದ್ದಾಗಿರುತ್ತೆ ಆದುದರಿಂದ ಸರ್ಕಾರಕ್ಕೆ ನಾವು ಮನವಿ ಮಾಡಿದ್ದೇವೆ ಈ ಹಿಂದೆ ಇದ್ದಂತಹ ನಿಯಮವನ್ನೇ ಜಾರಿ ಮಾಡ್ಬೇಕು ಎಂದು ಒತ್ತಾಯಿಸಿದ್ದೇವೆ, ನಮ್ಮ ಬೇಡಿಕೆಗಳನ್ನ ಗಣನೆಗೆ ತೆಗೆದುಕೊಳ್ಳದೆ ಹೋದಲ್ಲಿ ನಮ್ಮ ಹೋರಾಟವನ್ನ ವಿಧಾನಸೌಧದ ಒಳಗೂ ಸಹ ನೆಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

