ಚಾಮರಾಜನಗರ: ಅಕ್ರಮ ಗಣಿಗಾರಿಕೆ, ಕಲ್ಲು, ಎಂ ಸ್ಯಾಂಡ್ ಸಾಗಾಟದ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ಗಡಿ ಜಿಲ್ಲೆ ಚಾಮರಾಜನಗರ ನಗರ ಜಿಲ್ಲೆ ಗುಂಡ್ಲುಪೇಟೆ ಭಾಗದಿಂದ ಕೇರಳಕ್ಕೆ ಎಗ್ಗಿಲ್ಲದೆ ಎಂ.ಸ್ಯಾಂಡ್, ಜಲ್ಲಿಕಲ್ಲು, ಬಿಳಿಕಲ್ಲು ಸಾಗುತ್ತಿದ್ದಾರೆ.

ಪರ್ಮಿಟ್ ಇಲ್ಲದೆ ಕೇರಳಕ್ಕೆ ಕಲ್ಲುಸಾಗಾಣಿಕೆ ನಡೆಯುತ್ತಿದೆ. ಸರ್ಕಾರರ ಬೊಕ್ಕಸಕ್ಕೆ ಆರ್ಥಿಕ ನಷ್ಟವುಂಟಾಗಿದೆ. ಅಕ್ರಮ ಸಾಕಾಣಿಕೆ ಮಾಡುತ್ತಿದ್ದ ಲಾರಿ, ಟಿಪ್ಪರ್ ಗಳನ್ನು ರೈತರು ತಡೆದಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕಲು ರೈತರಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಪ್ರತನಿತ್ಯ ನೂರಾರು ಲಾರಿಗಳಿಂದ ಕಲ್ಲು, ಎಂ ಸ್ಯಾಂಡ್ ಸಾಗಾಟವಾಗುತ್ತಿದೆ. ಕರ್ನಾಟಕದ ಸಂಪತ್ತು ಅನ್ಯ ರಾಜ್ಯದ ಪಾಲಾಗುತ್ತಿರುವುದಕ್ಕೆ ಬ್ರೇಕ್ ಹಾಕಲು ರೈತರ ಒತ್ತಾಯವಾಗಿದೆ.

ಯಾವುದೆ ಅನುಮತಿ ಇಲ್ಲದೆ ರಾಜಾರೋಷವಾಗಿ ಸಾಗಾಟ ಮಾಡುತ್ತಿದ್ದು, ಆರ್.ಟಿ.ಒ ಪೊಲೀಸ್, ಗಣಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ ಆರೋಪ ಮಾಡಿದ್ದಾರೆ.