ಚಾಮರಾಜನಗರ : ತೋಟದಲ್ಲಿ ಕಾಣಿಸಿಕೊಂಡ ಭಾರೀ ಗ್ರಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ದಾಸನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ದಾಸನಹುಂಡಿ ಗ್ರಾಮದ ರಾಜೇಶ್ ಎಂಬುವರ ತೋಟದಲ್ಲಿ ಬಾರಿ ಗಾತ್ರದ ಹೆಬ್ಬಾವನ್ನ ಸಂರಕ್ಷಣೆ ಮಾಡಿದ ಸ್ನೇಕ್ ಮಹೇಶ್ ಬಾರಿ ಗಾತ್ರದ ಹೆಬ್ಬಾವನ್ನ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಹಸಿರು ಮತ್ತು ಮಳೆಗಾಲದ ಸಂದರ್ಭದಲ್ಲಿ ಹೆಬ್ಬಾವು ಆಹಾರವನ್ನರಸಿ ಕಾಡಿನಿಂದ ಒಮ್ಮೊಮೆ ಹೊರಬರುವುದು ಸಾಮಾನ್ಯವಾಗಿರುವುದರಿಂದ ರೈತಾಪಿ ವರ್ಗ ಜಾಗೃತೆವಹಿಸಬೇಕು ಎಂದು ಸಲಹೆ ನೀಡಿದರು. ಸುರಕ್ಷಿತವಾಗಿ ಸಂರಕ್ಷಣೆ ಮಾಡಿ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್ ಹಾಗೂ ಅರಣ್ಯ ವನ್ಯಜೀವಿ ಸದಸ್ಯ ಮಲ್ಲೇಶ್ ರವರ ಜೊತೆ ಬೆಳಗಿರಿರಂಗನ ಬೆಟ್ಟದ ಅರಣ್ಯದಲ್ಲಿ ಬಿಡಲಾಗಿದೆ.

