ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಅಜ್ಜೀಪುರ ಸಫಾರಿ ಮಾರ್ಗದ ಕಾಡಿನಲ್ಲಿ ಸನಿಹದಲ್ಲೇ ಹೆಬ್ಬುಲಿಯನ್ನ ಕಂಡ ಪ್ರವಾಸಿಗರು ಸಂತಸಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ದ್ವಿಗುಣಗೊಳ್ಳತೊಡಗಿವೆ ಅದರಂತೆ ಮಲೆಮಹದೇಶ್ವರ ಬೆಟ್ಟದಲ್ಲಿಯೂ ಹುಲಿಗಳ ದರ್ಶನವಾಗುತ್ತಿದೆ.

ಪ್ರತಿ ನಿತ್ಯ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಅಜ್ಜೀಪುರ ಸಫಾರಿ ಮಾರ್ಗದಲ್ಲಿ ಪ್ರವಾಸಿಗರು ಮತ್ತು ಪರಿಸರ ಪ್ರೇಮಿಗಳು ಸಫಾರಿ ಮಾಡುವ ಸಮಯದಲ್ಲಿ ಹೆಬ್ಬುಲಿ ಕಾಣಿಸಿಕೊಳ್ಳುವ ಮೂಲಕ ರಗಡ್ ಲುಕ್ ಕೊಡ್ತಿದೆ, ಬಂಡೀಪುರದಲ್ಲೂ ಭೀಮನ ದರ್ಬಾರ್ ಜೋರಾಗಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ.