ಚಾಮರಾಜನಗರ : ಪರ್ಮಿಟ್ ಇಲ್ಲದ ಟಿಪ್ಪರ್ಗಳಿಗೆ ಭಾರಿ ದಂಡ ವಿಧಿಸಲಾಗಿದೆ. ರಾಜ್ಯದಿಂದ ಕೇರಳಕ್ಕೆ ಅಕ್ರಮ ಜಲ್ಲಿ ಕಲ್ಲು ಸಾಗಾಟ ಮಾಡಲಾಗಿತ್ತು. ಎರಡು ಟಿಪ್ಪರ್ಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 91620 ರೂ ದಂಡ ವಿಧಿಸಿದ್ದಾರೆ.

ಬಂಡೀಪುರದ ಮದ್ದೂರು ಚೆಕ್ಪೋಸ್ಟ್ ಬಳಿ ತಪಾಸಣೆ ವೇಳೆ ರಾಜಧನ ವಂಚಕರು ಸಿಕ್ಕಿಬಿದ್ದಿದ್ದಾರೆ. ಪ್ರತಿನಿತ್ಯ ಲಕ್ಷಾಂತರ ರೂ ಕೇರಳಿಗರು ರಾಜಧನ ವಂಚಿಸುತ್ತಿದ್ದರು. ಕೆ ಎಲ್ 08 ಸಿಎ 0331 ನೋಂದಣಿ ಟಿಪ್ಪರಿಗೆ ದಂಡ ವಿಧಿಸಿದ್ದು, ಮತ್ತೊಂದು ಟಿಪ್ಪರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದ ಟಿಪ್ಪರ್ ಗೆ 51620, ಮತ್ತೊಂದ ಟಿಪ್ಪರ್ ಗೆ 40,000 ದಂಡ ವಿಧಿಸಲಾಗಿದೆ.

