ಗುಂಡ್ಲುಪೇಟೆ : ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರುವನ್ನು ಚಿರತೆ ಹೊತ್ತೊಯ್ದು ಬಲಿ ಪಡೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ.
ಪಡಗೂರು ಗ್ರಾಮದ ಮಲ್ಲೇಶ್ ಎಂಬವರು ಕರು ಕಳೆದುಕೊಂಡವರು. ಕೊಟ್ಟಿಗೆಗೆ ನುಗ್ಗಿದ ಚಿರತೆಯು ಕರುವನ್ನು ಎಳೆದೊಯ್ದು ಸ್ವಲ್ಪ ತಿಂದು ಪರಾರಿಯಾಗಿದ್ದು ಊರಿನ ಸಮೀಪವೇ ಈ ದಾಳಿ ನಡೆದಿದ್ದು ರೈತರು ಭಯಬೀತರಾಗಿದ್ದಾರೆ.
ಇನ್ನು, ಈ ಕುರಿತು ರೈತ ಮುಖಂಡ ಪಡಗೂರು ಶಿವಕುಮಾರ್ ಮಾತನಾಡಿ, ಅರಣ್ಯ ಇಲಾಖೆಯು ಚಿರತೆ ಸೆರೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ, ರೈತರು ಹಾಗೂ ಕಾರ್ಮಿಕರು ಜಮೀನಿಗೆ ತೆರಳಲು ಭಯಪಡುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದು ಕೂಡಲೇ ಮಲ್ಲೇಶ್ ಅವರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.

