ಗುಂಡ್ಲುಪೇಟೆ : ತಾಲ್ಲೂಕಿನ ಹೋಬಳಿ ಕೇಂದ್ರ ತೆರಕಣಾಂಬಿ ಗ್ರಾಮದಲ್ಲಿ ಇರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ಪಾಳು ಬಿದ್ದಿರುವಂತೆ ಕಾಣ ತೊಡಗಿದ್ದು, ಸಂಬಂಧ ಪಟ್ಟವರು ಸ್ವಚ್ಛತೆಗೊಳಿಸಿ ಸರ್ಕಾರಿ ಕಟ್ಟಡವನ್ನು ಉಳಿಸಿ ಕೊಳ್ಳುವುದರ ಮೂಲಕ ಉಪಯೋಗಕ್ಕೆ ಬರುವಂತೆ ಚಾಲನೆ ನೀಡಬೇಕೆಂದು ಗಡಿನಾಡು ರಕ್ಷಣಾ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಮುನೀರ್ ಪಾಷಾ ಒತ್ತಾಯಿಸಿದ್ದಾರೆ.
ಈ ಶಾಲೆ ಪ್ರಮುಖ ರಸ್ತೆಯಲ್ಲಿದ್ದು ಅಧಿಕಾರಿಗಳು ಗಣ್ಯರು ಸದಸ್ಯರು ಎಲ್ಲರೂ ಇಲ್ಲೇ ತಿರುಗಾಡುವಾಗ ಕಂಡರೂ ಇಂತಹ ವ್ಯವಸ್ಥೆ ಯಲ್ಲಿ ಇದೆ ಎಂದರೆ ಬೇಸರದ ಸಂಗತಿ. ಶಾಲೆ ಚಾಲನೆಯಲ್ಲಿ ಇದಿಯೋ ಇಲ್ಲವೋ ಗೊತ್ತಿಲ್ಲ ಆದರೆ ಈ ಕಟ್ಟಡ ಉತ್ತಮ ರೀತಿಯಲ್ಲಿ ಇರುವುದರಿಂದ ಇಲ್ಲಿ ಬೆಳೆದಿರುವ ಗಿಡಗಂಟಿಗಳು ಕಸದ ರಾಶಿಯನ್ನು ಸ್ವಚ್ಛಗೊಳಿಸಿ ಕಟ್ಟಡವನ್ನಾದರೂ ಉಳಿಸಿಕೊಂಡು ಉಪಯೋಗಕ್ಕೆ ಬರುವಂತೆ ಮಾಡಬೇಕು.
ಸರ್ಕಾರ ವಿವಿಧ ಯೋಜನೆಯ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ಗಳನ್ನು ಖರ್ಚು ಮಾಡಿ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಲು ಶ್ರಮಿಸುತ್ತಾರೆ ಆದರೆ ಯಾರು ಇಲ್ಲದಂತೆ ಪಾಳು ಬಿಳುವಂತೆ ಮಾಡುವುದು ಯಾವ ನ್ಯಾಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

