ಚಾಮರಾಜನಗರ : ಜಿಲ್ಲೆಯ ಶ್ರೀ ಕ್ಷೇತ್ರ ಮಲೇ ಮಹದೇಶ್ವರನ ಸನ್ನಿಧಿಯಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 93 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

ಬೆಟ್ಟದ ರಂಗಮಂದಿರದ ಆವರಣದಲ್ಲಿ ಮಲೇ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜನೆ ಮಾಡಲಾಗಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ಜೋಡಿಗಳಿಗೆ ತಾಳಿ ಕಾಲುಂಗುರ ವಿತರಣೆ ಮಾಡುವ ಮೂಲಕ ಸುತ್ತೂರು ಶ್ರೀಗಳು ಆಶೀರ್ವದಿಸಿದರು.

