ಚಾಮರಾಜನಗರ: ಬಂಡಿಪುರ ಸಫಾರಿಯಲ್ಲಿ ಏಕಕಾಲದಲ್ಲಿ ಐದು ಹುಲಿಗಳು ಪ್ರತ್ಯಕ್ಷವಾಗಿದೆ. ದೇಶದ ಪ್ರಮುಖ ಅಭಯಾರಣ್ಯಗಳಲ್ಲಿ ಬಂಡಿಪುರ ಒಂದಾಗಿದೆ. ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿದೆ.
ನಾಲ್ಕು ಮುದ್ದಾದ ಮರಿಗಳ ಜೊತೆ ತಾಯಿ ಹುಲಿ ಕಂಡು ಪ್ರವಾಸಿಗರು ರೋಮಾಂಚನಗೊಂಡರು. ಸಫಾರಿಗರ ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

