ಚಾಮರಾಜನಗರ : ಮಹದೇಶ್ವರ ಬೆಟ್ಟದ ಚಿಕ್ಕ ಕೊಳದಲ್ಲಿ ಮೀನುಗಳು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ.
ಸತ್ತು ನೀರಿನಲ್ಲಿ ಮೀನುಗಳು ತೇಲುತ್ತಿದೆ. ಕಲುಷಿತ ನೀರು, ಕೊಳೆತು ಸುತ್ತಮುತ್ತಲ ವಾತಾವರಣ ಗಬ್ಬು ನಾರುತ್ತಿದೆ. ಚಿಕ್ಕಕೊಳದಲ್ಲಿ ಭಕ್ತರು ಸ್ನಾನಮಾಡುತ್ತಿದ್ದರು. ಮೂಗು ಮುಚ್ಚಿಕೊಂಡು ವಾಪಾಸ್ ಹೋಗುವಂತ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಾವಿಗೀಡಾದ ಮೀನು, ತ್ಯಾಜ್ಯಗಳಿಂದ ಅನೈರ್ಮಲ್ಯ ಉಂಟಾಗಿದೆ. ಭಕ್ತರಲ್ಲಿ ಆತಂಕ ತಂದ ಮೀನುಗಳು ಅನುಮಾನಾಸ್ಪದ ಸಾವನ್ನಪ್ಪಿದೆ. ಪರಿಸರವಾದಿಗಳು ಅನುಮಾನ ವ್ಯಕ್ತ ಪಡಿಸಿದ್ದಾರೆ.

