ಗುಂಡ್ಲುಪೇಟೆ : ಕಗ್ಗಳದಹುಂಡಿ ಗ್ರಾಮದ ರೈತರ ಜಮೀನುಗಳಲ್ಲಿ ಹುಲಿ ಓಡಾಟ ಕಂಡು ಬಂದಿದ್ದು ರೈತರು ಆತಂಕಗೊಂಡಿದ್ದಾರೆ.

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮದ್ದೂರು ಅರಣ್ಯ ವಲಯಕ್ಕೆ ಕಗ್ಗಳದಹುಂಡಿ ಒಳಪಡಲಿದ್ದು ಕಳೆದ ಮೂರ್ನಾಲ್ಕು ದಿನಗಳಿಂದಲೂ ಹುಲಿ ಕಾಣಿಸಿಕೊಳ್ಳುತ್ತಿದೆ. ಇಂದು ಕೂಡ ಕಾಡುಹಂದಿಯನ್ನು ಬೇಟೆಯಾಡಿ ತಿಂದು ಪರಾರಿಯಾಗಿದೆ.

ರೈತರು ಹುಲಿ ಓಡಾಡದ ಬಗ್ಗೆ ಮಾಹಿತಿ ತಿಳಿಸಿದ ಕೂಡಲೇ, ಆರ್ ಎಫ್ಒ ಪುನೀತ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಡ್ರೋಣ್ ಮೂಲಕ ಹುಲಿ ಚಲನವಲನ ಅರಿಯಲು ಪ್ರಯತ್ನಿಸಿದ್ದಾರೆ. ಆದರೆ, ಕ್ಯಾಮರಾ ಟ್ರಾಪ್ ಮತ್ತು ಡ್ರೋಣ್ ನಲ್ಲಿ ಹುಲಿ ಕಾಣಸಿಕ್ಕಿಲ್ಲ.  ಸದ್ಯ, ಹುಲಿ ಸೆರೆಗೆ ಬೋನ್ ನ್ನು ಕೂಡ ಅರಣ್ಯ ಇಲಾಕೆ ಇರಿಸಿದ್ದು ಹುಲಿ ಸೆರೆಗೆ ಕ್ರಮ ಕೈಗೊಂಡಿದ್ದಾರೆ.