ಚಾಮರಾಜನಗರ : ಕಾಡು ಪ್ರಾಣಿಗಳಿಗೆ‌ ಇಟ್ಟಿದ್ದ ಬೋನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕೂಡಿ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಪುರ ಗ್ರಾಮದಲ್ಲಿ ನಡೆದಿದೆ.

ಹುಲಿ, ಚಿರತೆ ಅವಳಿಗಳಿಂದ ಗ್ರಾಮಸ್ಥರು  ಬೇಸತ್ತರು. ಬೋನಿನೊಳಗೆ ಅರಣ್ಯಾಧಿಕಾರಿಗಳನ್ನ ರೈತರು ಕೂಡಿ ಹಾಕಿದ್ದಾರೆ. ಕಾಡು ಪ್ರಾಣಿಗಳನ್ನ‌ ಹಿಡಿಯದ ಅರಣ್ಯ ಇಲಾಖೆ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡು ಪ್ರಾಣಿಗಳ ಅವಳಿ ತಪ್ಪಿಸಲು ವಿಫಲವಾದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೋನ್ ಇಟ್ಟು ಸುಮ್ಮನಾಗಿದ್ದ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಪ್ರಾಣಿ ಬೋನ್ಗೆ ಬೀಳದೇ ಇದ್ದ ಕಾರಣ ಅರಣ್ಯಾಧಿಕಾರಿಗಳನ್ನೇ  ಗ್ರಾಮಸ್ಥರು ಕೂಡಿ ಹಾಕಿದರು.  ಬೇಜಾವಾಬ್ದಾರಿ ಹೇಳಿಕೆ ಹಿನ್ನೆಲೆ ಅರಣ್ಯಾಧಿಕಾರಿಗಳನ್ನ  ರೈತರು  ಕೂಡಿ ಹಾಕಿದರು.