ಚಾಮರಾಜನಗರ: ಕಬ್ಬಿನ ಎಫ್ ಆರ್ ಪಿ ದರವನ್ನು ಮರು ಪರಿಶೀಲನೆ ಮಾಡಬೇಕು ಎಂದು ಚಾಮರಾಜನಗರದಲ್ಲಿ ರೈತರು ಒತ್ತಾಯಿಸಿದರು. ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜು ಮಾತನಾಡಿ, 1ಟನ್ ಕಬ್ಬಿನ 10.25 ಇಳುವರಿಗೆ ಕೇಂದ್ರ ಸರ್ಕಾರ 2025-26ರ ಸಾಲಿಗೆ 3550 ನಿಗದಿ ಮಾಡಿದ್ದು,

ಇದು ಅವೈಜ್ಞಾನಿಕವಾಗಿದ್ದು, ಕೇವಲ ಪ್ರತಿ ಟನ್ ಗೆ 150 ಮಾತ್ರ ಹೆಚ್ಚುವರಿ ಮಾಡಿದ್ದು, ಉತ್ಪಾದನಾ ವೆಚ್ಚ ಹಾಗೂ ಕಟಾವು ಕೂಲಿ ಸಾಗಾಣಿಕೆ, ರಸಗೊಬ್ಬರ ಕೂಲಿ ಕಾರ್ಮಿಕರ ವೆಚ್ಚ ಎಲ್ಲವೂ ಹೆಚ್ಚಳವಾಗಿದ್ದು, ಪ್ರತಿ ಟೆನ್ ಕಬ್ಬಿಗೆ 150ರೂ ರಂತೆ ಒಂದು ಕೆಜಿ ಕಬ್ಬಿಗೆ ಕೇವಲ 15 ಪೈಸೆ ಮಾತ್ರ ಜಾಸ್ತಿ ಮಾಡಿ ರೈತರಿಗೆ ಕೇಂದ್ರ ಸರ್ಕಾರ ಬೆಲೆ ನಿಗದಿಯಲ್ಲಿ ಸಿಎಸಿಪಿ ವರದಿಯಂತೆ 4,500 ನಿಗದಿ ಮಾಡಬೇಕಾಗಿತ್ತು.

ಆದರೆ ಬಂಡವಾಳಶಾಹಿಗಳು ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಕೇವಲ ಪ್ರತಿ ಟನ್ ಕಬ್ಬಿಗೆ 150 ರೂಪಾಯಿ ಮಾತ್ರ ಹೆಚ್ಚುವರಿ ಮಾಡಿದ್ದು ಇದನ್ನು ತಕ್ಷಣ ಮರು ಪರೀಕ್ಷೆಯಲ್ಲಿ ಮಾಡಬೇಕೆಂದು ಒತ್ತಾಯಿಸುತ್ತೇವೆ. ರಾಜ್ಯ ಸರ್ಕಾರ ಈ ಒಂದು ಬೆಲೆಯನ್ನು ಒಪ್ಪದೆ ಪುನರ್ ಪರಿಶೀಲನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

ರಾಜ್ಯದಲ್ಲಿ ಚುನಾಯಿತ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಎಫ್ ಆರ್ ಪಿ ದರವನ್ನು ಪುನರ್ ಪರಿಶೀಲನೆಗೆ ಆಗ್ರಹಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಂದೆ ಎಪಿಎಂಸಿ ಹಾಗೂ ಸಹಕಾರ ಇಲಾಖೆಯ ಮುಖಾಂತರ ತೂಕದ ಯಂತ್ರಗಳನ್ನು ಅಳವಡಿಸಬೇಕು ತೂಕವಾದ ತಕ್ಷಣ ರೈತರಿಗೆ ಡಿಜಿಟಲ್ ಎಸ್ಎಂಎಸ್ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕು ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷಿಯ ಒಪ್ಪಂದ ಪತ್ರ ಜಾರಿಯಾಗಬೇಕು ಇಳುವರಿಯಲ್ಲಿನ ಮೋಸವನ್ನು ತಪ್ಪಿಸಲು ಸ್ಥಳೀಯ ರೈತ ಮುಖಂಡರು ಹಾಗೂ ತಜ್ಞರ ಸಮಿತಿಯನ್ನು ರಚಿಸಬೇಕು ಸಕ್ಕರೆ ಕಾರ್ಖಾನೆಗಳ ಆದಾಯ ಪತ್ರವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಶೀಲಿಸಿ,

ಹೆಚ್ಚುವರಿ ಲಾಭವನ್ನು ರೈತರಿಗೆ ಹಂಚಲು ಕ್ರಮ ಕೈಗೊಳ್ಳಬೇಕು ಕಟಾವು ಸಾಗಾಣಿಕೆಯನ್ನು ಸಕ್ಕರೆ ಕಾರ್ಖಾನೆಗಳು ಬರಿಸುವಂತೆ ಕ್ರಮ ಕೈಗೊಳ್ಳಬೇಕು ರಾಜ್ಯ ಸರ್ಕಾರ ತಕ್ಷಣ ಕಬ್ಬು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಕಳೆದ ಸಾಲಿನ 950 ಕೋಟಿ ಬಾಕಿಯನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಮಲಿಯೂರು ರಾಮನಕೆರೆಗೆ ನೀರು ತುಂಬಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರಿ ಕೆರೆಕಟ್ಟೆಗಳ ಒತ್ತುವರಿ ಆಗಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರೈತರ ಜೊತೆಗೂಡಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ರವರಿಗೆ ಹಕ್ಕು ಒತ್ತಾಯ ಪತ್ರ ಸಲ್ಲಿಸಿದ್ದೇವೆ. ನ

ಮ್ಮ ಹಕ್ಕೊತಾಯಗಳನ್ನು ಈಡೇರಿಸಲು ವಿಫಲವಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಜೊತೆಗೂಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್. ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ ಮುಖಂಡರಾದ ಪ್ರಕಾಶ್ ಗಾಂಧಿ, ಗುರುವಿನಪುರ ಚಂದ್ರು, ಆನಂದ, ಹೂನಹಳ್ಳಿ ಬಸವಣ್ಣ, ಶಾನಾಡ್ರಾಹಳ್ಳಿ ಬಸವರಾಜು, ಪಿ.ಮರಹಳ್ಳಿ ಶಿವಣ್ಣ. ಹೂರದಹಳ್ಳಿ ರಾಮಣ್ಣ ಇದ್ದರು.