ಗುಂಡ್ಲುಪೇಟೆ : ಭೀಮನಬೀಡು ಗ್ರಾಮದಲ್ಲಿ ಮೂಲಭೂತ ಸೌಕರ್ಯವನ್ನ ಒದಗಿಸದೆ ಮೌನಕ್ಕೆ ಶರಣಾಗಿದ್ದ ಗ್ರಾಮಪಂಚಾಯತಿ ಅಡಳಿತ ಮಂಡಳಿ ವಿರುದ್ಧ ಸಾಮೂಹಿಕ ನಾಯಕತ್ವ ರೈತ ಸಂಘ ಸದಸ್ಯರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಛೀಮಾರಿ ಹಾಕಿದರು.
ಗ್ರಾಮದಲ್ಲಿ ಬಹುತೇಕ ಚರಂಡಿಗಳು ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿದ್ದು ಸಾರ್ವಜನಿಕರು ಸಾಂಕ್ರಾಮಿಕ ಭೀತಿಯಲ್ಲಿ ಜೀವನದೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕನಿಷ್ಠ ಮೂಲಸೌಲಭ್ಯಕ್ಕೆ ಒತ್ತು ನೀಡದ ಪಿಡಿಓ ಭೋಜೇಶ್ ರನ್ನ ತರಾಟೆಗೆ ತೆಗೆದುಕೊಂಡ ರೈತ ಮುಖಂಡ ಹೊನ್ನೂರು ಪ್ರಕಾಶ್ ಸರ್ಕಾರದಿಂದ ಬರುವಂತಹ ಅನುದಾನಗಳನ್ನ ನುಂಗಿ ನೀರು ಕುಡಿಯುತ್ತಿದ್ದೀರಿ.
ಸಾರ್ವಜನಿಕರ ಸೇವೆ ಮಾಡಬೇಕಿರುವ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಜೋತು ಬಿದ್ದಿರುವುದಕ್ಕೆ ಗ್ರಾಮದಲ್ಲಿನ ಜ್ವಲಂತ ಸಮಸ್ಯೆಗೆ ಮೂಲಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.

